ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್ ವಿತರಣೆ ಆರ್ಥಿಕ‌ಸಹಾಯ

ಕೋಟ:ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ ಚೇರ್ ವಿತರಣೆ ಜನ್ಮತಃ ದೈಹಿಕ ಹಾಗೂ ಬೌದ್ಧಿಕ ಸವಾಲುಗಳನ್ನು ಎದುರಿಸುತ್ತಿರುವ ಗಿಳಿಯಾರು ನಿವಾಸಿ ಸುಮಾರು ೨೬ ವರ್ಷ ಪ್ರಾಯದ ಕೌಶಿಕ ಎಂಬ ಯುವಕನಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಗಾಲಿ ಕುರ್ಚಿ ಮತ್ತು ಆರ್ಥಿಕ ನೆರವನ್ನು ನೀಡಲಾಯಿತು. ವಲಯ ತರಬೇತುದಾರ ಸುರೇಶ್ ಬೇಳೂರು ವ್ಹೀಲ್ ಚೇರ್ ವಿತರಿಸಿ, ಶೀಘ್ರದಲ್ಲಿ ಗುಣಮುಖವಾಗಲೆಂದು ಹಾರೈಸಿದರು.

ಈ ಸಂದರ್ಭ ವಲಯ ೨ರ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ, ಮಾಜಿ ಅಧ್ಯಕ್ಷರಾದ ಡಾ.ಗಣೇಶ್ ಯು, ಸುರೇಶ್ ಆಚಾರ್, ಪ್ರಕಾಶ್ ಹಂದಟ್ಟು, ಸದಸ್ಯರಾದ ರಾಘವೇಂದ್ರ ಆಚಾರ್, ಭಾಸ್ಕರ್ ಪೂಜಾರಿ, ಲಂಭೋದರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ರೋಟರಿ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್ ವಿತರಣೆ ಆರ್ಥಿಕ‌ಸಹಾಯನ್ನು ವಲಯ ತರಬೇತುದಾರ ಸುರೇಶ್ ಬೇಳೂರು ವ್ಹೀಲ್ ಚೇರ್ ವಿತರಿಸಿದರು. ವಲಯ ೨ರ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಇದ್ದರು.

Leave a Reply

Your email address will not be published. Required fields are marked *