ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಪ್ರದಾನ ಮಾಡುತ್ತಿರುವ ಕೃಷ್ಣಪ್ರೇಮ ಮತ್ತು ವಿಶ್ವನೃತ್ಯಪ್ರಭಾ ಪ್ರಶಸ್ತಿಪ್ರದಾನ ಕಾರ್ಯಕ್ರಮ ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆಯಿತು ನೃತ್ಯ ಕ್ಷೇತ್ರದ ಸಂಗೀತ ವಿಭಾಗದಲ್ಲಿ ಸಾಧನೆ ಮಾಡಿದ ರಾಘವೇಂದ್ರ ಆಚಾರ್ಯ ಮಣಿಪಾಲ್ ,ಸಂಗೀತ ಬಾಲಚಂದ್ರ, ವರ್ಣಾಲಂಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಸನ್ನ ಹಿರಿಯಡ್ಕ, ರವರಿಗೆ ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ನೃತ್ಯಗುರುಗಳಾದ ವಿದ್ವಾನ್ ಯು.ಕೆ.ಪ್ರವೀಣ್ ಮಂಗಳೂರು ಇವರಿಗೆ ವಿಶ್ವನೃತ್ಯಪ್ರಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರೊ| ಅರವಿಂದ ಹೆಬ್ಬಾರ್,ವಿಶ್ವನಾಥ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ರವರು ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರೇಮಾ ರಾವ್,ಮಾನಸಿ ಸುಧೀರ್ ಉಪಸ್ಥಿತರಿದ್ದರು. ಕು|ಸ್ವಸ್ತಿಭಟ್ ಪ್ರಾರ್ಥಿಸಿ, ವಿದ್ವಾನ್ ಸುಧೀರ್ ರಾವ್ ಕೊಡವೂರು ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಚಂದ್ರಶೇಖರ ರಾವ್ ನಿರೂಪಿಸಿದರು.












Leave a Reply