ಕೋಟ: ಕರಾವಳಿ ಭಾಗದಲ್ಲಿ ಆನಂದ್ ಸಿ ಕುಂದರ್ ಶೈಕ್ಷಣಿಕ ಕ್ರಾಂತಿಯನ್ನು ಪಸರಿಸಿದ್ದಾರೆ ಈ ಮೂಲಕ ಗ್ರಾಮೀಣ ಹಳ್ಳಿ ಭಾಗದ ಮಕ್ಕಳು ವಿದ್ಯಾರ್ಜನೆ ಪಡೆದು ಸುಸಂಸ್ಕೃತರಾದರೆ ಶೈಕ್ಷಣಿಕ ದಾನಿಗಳಾದ ಕುಂದರ್ ರವರು ಸಾರ್ಥಕ್ಯ ಕಂಡಂತೆ ಎಂದು ಪ್ರಸಿದ್ಧ ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್ ಅಭಿಪ್ರಾಯಪಟ್ಟರು. ಶನಿವಾರ ಕೋಟದ ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಲ್ಲಿನ ಪಡುಕರೆ ಶಾಲೆಯ ಹಿಂದಿನ ವಿದ್ಯಾರ್ಥಿ ಶಿರಿಯಾರ ಮನೆತನದ ಸಂದೇಶ್ ಕುಮಾರ್ ಇನ್ಫೋಸಿಸ್ ಮೂಲಕ 15ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿರಬೇಕು ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತು ಸಂಯಮ ಕಾಯ್ದುಕೊಳ್ಳಬೇಕು ಸಮಾಜಕ್ಕೆ ಮಾದರಿ ವ್ಯಕ್ತಿತ್ವವನ್ನು ನೀಡುವ ರೀತಿಯಲ್ಲಿ ಬೆಳೆದು ತೊರಬೇಕು ಎಂದು ಕಂಪ್ಯೂಟರ್ ಕೊಡುಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಶಿರಿಯಾರ ಮನೆತವನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಕಂಪ್ಯೂಟರ್ ಅನ್ನು ಸಂದೇಶ್ ಪೂಜಾರಿ ಇವರ ತಂದೆ ಕೃಷ್ಣ ಪೂಜಾರಿ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ ಇವರಿಗೆ ಹಸ್ತಾಂತರಿಸಿದರು. ಸಭಾಧ್ಯಕ್ಷತೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿದ್ದರು.ಈ ಸಂದರ್ಭದಲ್ಲಿ ಕಂಪ್ಯೂಟರ್ ಕಾಲೇಜಿಗೆ ತರುವಲ್ಲಿ ಪಾತ್ರವಹಿಸಿದ ಶಿರಿಯಾರ ಮನೆತನದ ಕೃಷ್ಣ ಪೂಜಾರಿಯವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ,ರಮೇಶ್ ಎಚ್ ಕುಂದರ್, ಶಿರಿಯಾರ ಸತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕ ಕಿಶೋರ್ ಹಂದೆ ನಿರೂಪಿಸಿದರು.ಕೋಟದ ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಲ್ಲಿನ ಪಡುಕರೆ ಶಾಲೆಯ ಹಿಂದಿನ ವಿದ್ಯಾರ್ಥಿ ಶಿರಿಯಾರ ಮನೆತನದ ಸಂದೇಶ್ ಕುಮಾರ್ ಇನ್ಫೋಸಿಸ್ ಮೂಲಕ 15ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಕಾರ್ಯಕ್ರಮದಲ್ಲಿಕಂಪ್ಯೂಟರ್ ಕಾಲೇಜಿಗೆ ತರುವಲ್ಲಿ ಪಾತ್ರವಹಿಸಿದ ಶಿರಿಯಾರ ಮನೆತನದ ಕೃಷ್ಣ ಪೂಜಾರಿಯವರನ್ನು ಗೌರವಿಸಲಾಯಿತು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಶೈಕ್ಷಣಿಕ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ,ರಮೇಶ್ ಎಚ್ ಕುಂದರ್,ಶಿರಿಯಾರ ಸತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.












Leave a Reply