ಅಶ್ವಿನಿ ಅಂಗಡಿ ‘ಸಂಕ್ರಾಂತಿ’ಕವಿತೆ ದಸರಾ ಕವಿಗೋಷ್ಠಿಗೆ ಆಯ್ಕೆವಿಶ್ವವಿಖ್ಯಾತ ಹಾಗೂ ನಾಡಹಬ್ಬ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಕ್ಟೋಬರ 13 ರಿಂದ 17 ರ ವರೆಗೆ ಬಿ,ಎಂ,ಶ್ರೀ ಸಭಾಂಗಣ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸ ಗಂಗೋತ್ರಿ ಮೈಸೂರಿನಲ್ಲಿ ನಡೆಯುವ 2026 ರ ‘ಚಿಗುರು’ಕವಿಗೋಷ್ಠಿ ಯಲ್ಲಿ ಬಾದಾಮಿ ತಾಲೂಕಿನ ಶಿಕ್ಷಕಿ ಹಾಗೂ ಲೇಖಕಿಯಾದ ಶ್ರೀಮತಿ ಅಶ್ವಿನಿ ಅಂಗಡಿಯವರ ಸ್ವರಚಿತ ‘ ಸಂಕ್ರಾಂತಿ ‘ ಕವಿತೆಯು ಆಯ್ಕೆಯಾಗಿದ್ದು ,ಈ ಕಾರ್ಯಕ್ರಮವನ್ನು ಖ್ಯಾತ ಮಕ್ಕಳ ಸಾಹಿತಿಗಳಾದ ಶ್ರೀ ಬಿಳಿಗೆರೆ ಕೃಷ್ಣಮೂರ್ತಿಯವರು ಉದ್ಘಾಟಿಸಲಿದ್ದಾರೆ,ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಪ್ರಖ್ಯಾತ ಸಾಹಿತಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರು ವಹಿಸಲಿದ್ದಾರೆ,ಇನ್ನೂ ಮುಖ್ಯ ಅತಿಥಿಗಳಾಗಿ ಡಾ,ಕವಿತಾ ಕುಸುಗಲ್ ಪ್ರಸಿದ್ಧ ಲೇಖಕರು ಹಾಗೂ ಚಿಗುರು ಅತಿಥಿಯಾಗಿ ಕು.ತಾನೀಶ್ ಅವರು ವಹಿಸಲಿದ್ದಾರೆಯಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Leave a Reply