ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಎನ್.ಎಸ್.ಎಸ್. ಶ್ರಮದ ಮೌಲ್ಯ ಕಲಿಸುತ್ತದೆ – ಶ್ರೀ ಲಕ್ಷ್ಮೀನಾರಾಯಣ ಉಡುಪ

ಎನ್.ಎಸ್.ಎಸ್ ಶ್ರಮದ ಮೌಲ್ಯ ಕಲಿಸುತ್ತದೆ – ಶ್ರೀ ಲಕ್ಷ್ಮೀನಾರಾಯಣ ಉಡುಪಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯು ಅತ್ಯಂತ ಮೌಲ್ಯಯುತವಾಗಿದೆ. ಯುವಕರು ಸೇವಾ ಮನೋಭಾವ ಮತ್ತು ಪರಿಶ್ರಮದ ಮೌಲ್ಯ ತಿಳಿಯಲು ರಾಷ್ಟೀಯ ಸೇವಾ ಯೋಜನೆ ಅವಕಾಶ ಕಲ್ಪಿಸುತ್ತದೆ. ದೇಶಭಕ್ತಿ, ವ್ಯಕ್ತಿತ್ವ ವಿಕಸನ ಮತ್ತು ಸೇವೆಯ ಮೌಲ್ಯ ಅರಿಯಲು ಎನ್.ಎಸ್.ಎಸ್ ಮೂಲಕ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ಎಂದು ಕ್ರೋಢ ಶ್ರೀ ಶಂಕರನಾರಾಯಣ ದೇವಳದ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಉಡುಪ ಹೇಳಿದರು.

ಅವರು ಶಂಕರನಾರಾಯಣದ ಕ್ರೋಢ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣದ ರಾಷ್ಟ್ರೀಯ ಸೇವಾ ಯೋಜನೆಯ ಒಂದು ದಿನದ ವಿಶೇಷ ಶಿಬಿರದ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಕಾರ್ಯಕ್ರಮದ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು.

ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ರಾಮಚಂದ್ರ ಜಿ ಎಸ್ ಪ್ರಸ್ತಾವನೆಗೈದರು. ಶಿಬಿರಾರ್ಥಿ ಕು. ಭಾವನಾ ನಿರೂಪಿಸಿದರು. ಕು. ಶ್ರೀದೇವಿ ಸ್ವಾಗತಿಸಿ ಕು. ರಶ್ಮಿತಾ ವಂದಿಸಿದರು. ಯೋಜನಾಧಿಕಾರಿಗಳಾದ ಕು. ಪ್ರಜ್ಞಾ, ಶ್ರೀ ಸಚಿನ್ ಎಸ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಮಹಾಂತೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *