ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮುಜರಾಯಿ ಸಚಿವ ಕೆ ಎಸ್ ಬಸವoತಪ್ಪ ಕೊಡವೂರು ದೇವಳಕ್ಕೆ ಭೇಟಿ

ಇತಿಹಾಸ ಪ್ರಸಿದ್ಧ ಕೊಡವೂರು ಶ್ರೀ ಶಂಕರನಾರಾಯಣ ದೇವಳಕ್ಕೆ ಕರ್ನಾಟಕ ಸರಕಾರದ ಮುಜರಾಯಿ ಸಚಿವ ಭೇಟಿ ನೀಡಿ ದೇವರ ದರ್ಶನ ಪಡೆದರು.ದೇವಳದ ಸಮುದಾಯ ಭವನದ ಕಾಮಗಾರಿಗೆ ಸರಕಾರದಿಂದ ದೇಣಿಗೆ ನೀಡುವ ಭರವಸೆ ನೀಡಿದರು. ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸಚಿವರನ್ನು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಅಶೋಕ್ ಕುಮಾರ್ ಕೊಡವೂರು, ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಕಲ್ಮಾಡಿ, ದೇವಳದ ಪವಿತ್ರಪಾಣಿ ಜನಾರ್ದನ್ ಕೊಡವೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೀತಾರಾಮ್ ಆಚಾರ್ಯ, ವಾದಿರಾಜ್ ಸಾಲ್ಯಾನ್, ಯಶೋಧರ್ ಸಾಲ್ಯಾನ್, ಭಾಸ್ಕರ್ ಪಾಲನ್ ಬಾಚನಬೈಲು, ಕೆ. ಬಾಬ, ಶೀಲಾ ಸೇರಿಗಾರ್, ಉಷಾ ಆನಂದ ಸುವರ್ಣ, ,ಶಿವಪ್ಪ ಕಾಂಚನ್ ನಾಗರಾಜ್ ಸುವರ್ಣ, ಬಾಲಕೃಷ್ಣ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *