ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ರಥಾಲಯ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ಕಳೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ರಥಾಲಯ (ರಥದ ಕೊಟ್ಟಿಗೆ) ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಭಕ್ತಿಭಾವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ದೇವಳದ ಅರ್ಚಕರಾದ ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಖ್ಯಾತ್ ಶೆಟ್ಟಿ, ಮೊಕ್ತೇಸರರಾದ ಶ್ರೀ ಐತು ಎಂ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಹಾಗೂ ರಥಾಲಯದ ದಾನಿಗಳಾದ ಶ್ರೀ ಟಿ. ಶಂಬು ಶೆಟ್ಟಿ, ಭಕ್ತವೃಂದದ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಅದೇ ರೀತಿ ಶ್ರೀ ಅವಿರಾಜ್ ಶೆಟ್ಟಿ, ಬೆಳ್ಕಳೆ ಶ್ರೀಹರ್ಷ ಭಟ್, ಶ್ರೀ ಸುಂದರ ಶೆಟ್ಟಿ, ಶ್ರೀ ಅಜಿತ್ ಶೆಟ್ಟಿ, ಶ್ರೀ ಉಮೇಶ್ ಶೆಟ್ಟಿ, ಶ್ರೀ ಪ್ರಭಾಕರ ಅಂಚನ್, ಶ್ರೀಮತಿ ಅನುಷಾ ಆಚಾರ್ಯ, ಶ್ರೀ ಕೃಷ್ಣರಾಜ್ ಭಾದ್ಯ, ಶ್ರೀ ರಮೇಶ್ ಆಚಾರ್ಯ ಸೇರಿದಂತೆ ಗ್ರಾಮಸ್ಥರು ಹಾಗೂ ಅನೇಕ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.ನೂತನ ರಥಾಲಯ ನಿರ್ಮಾಣವು ದೇವಸ್ಥಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ಆಶಯವನ್ನು ಭಕ್ತರು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *