ಕೋಟ:ಇಲ್ಲಿನ ಬ್ರಹ್ಮಾವರ ಸಮೀಪದ ಬೈಕಾಡಿ ಭದ್ರಗಿರಿ ವೀರ ವಿಠ್ಠಲ ದೇವಸ್ಥಾನದಲ್ಲಿ ಶ್ರೀ ಗುರುರಾಘವೇಂದ್ರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಯುವ ಕಲಾವಿದೆ ಪ್ರಜ್ಞಾ ಎಚ್ ಪೂಜಾರಿ ಹಂದಟ್ಟು ಇವರ ಕೈಯಂಗಳದಿ ರಂಗೋಲಿಯಲ್ಲಿ ಮೂಡಿಬಂದ ಶ್ರೀ ಗುರುರಾಘವೇಂದ್ರ ರಾಯರಿದ್ದಾರೆ ಚಿತ್ರ ಬಾರಿ ಪ್ರಶಂಸೆ ವ್ಯಕ್ತವಾಯಿತು.
ಈಕೆ ಈ ಹಿಂದೆ ಮಂದಾರ್ತಿ ದುರ್ಗಾಪರಮೇಶ್ವರಿ, ಕೋಟ ಅಮೃತೇಶ್ವರಿ, ಅಂಬಲಪಾಡಿ ಮಹಾಕಾಳಿ ಜನಾರ್ದನ, ಚಿತ್ರರಂಗದ ದೊಡ್ಡಣ್ಣ , ರಮೇಶ್ ಅರವಿಂದ್ ಹೀಗೆ ಹಲವು ಪ್ರಸಿದ್ಧ ದೇಗುಲ, ಗಣ್ಯರ ಚಿತ್ರ ಬಿಡಿಸಿ ಪ್ರಸಂಸೆಗೆ ಪಾತ್ರರಾಗಿದ್ದಾರೆ. ಈಕೆ ಚಿತ್ರ ಬಿಡಿಸಿ ಬಂದ ಹಣದಲ್ಲಿ ಅನಾರೋಗ್ಯ ಪೀಡಿತರಿಗೆ ನೆರವು ನೀಡಿದ್ದಾರೆ. ಕೋಟದ ಹಂದಟ್ಟು ಗೀತಾ ಪೂಜಾರಿಯ ಪುತ್ರಿಯಾಗಿದ್ದಾರೆ. ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಗೌರವಿಸಲಾಯಿತು.












Leave a Reply