ಕೋಟ: ಗೆಳೆಯರ ಬಳಗ ಕಾರ್ಕಡ ಇದರ 38ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ . ತಾರಾನಾಥ ಹೊಳ್ಳ ವಹಿಸಿದ್ದರು. ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ಹಾಗೂ ಅಡಿಟ್ ಮಾಡಿದ 2025-2026ರ ಆಯವ್ಯಯ ಕೋಶಾಧಿಕಾರಿ ಕೆ. ಶೀನ ಸಭೆಯಲ್ಲಿ ಮಂಡಿಸಿದರು. ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ನಂತರ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ,ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ- ಕೆ. ನಾಗರಾಜ ಉಪಾಧ್ಯ, ಜೊತೆ ಕಾರ್ಯದರ್ಶಿ ಕೆ. ಜಗದೀಶ ಆಚಾರ್ಯ, ಖಜಾಂಚಿ ಕೆ. ಶೀನ ,ಕಾರ್ಯಕಾರಿ ಸಮಿತಿಯಲ್ಲಿ ಕೆ. ಚಂದ್ರಕಾoತ ನಾಯರಿ, ಕೆ. ಶ್ರೀಕಾಂತ ಐತಾಳ ,ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ.ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ, ಕೆ. ಶೇಖರ, ಕೆ. ರಘ ಭಂಡಾರಿ , ಸುರೇಶ್ . ಇವರುಗಳು ಆಯ್ಕೆ ಆಗಿಯಾಗಿದ್ದಾರೆ.












Leave a Reply