ಕೋಟ: ಕೋಟದ ಮಿತ್ರ ಮಂಡಳಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ಪ್ರೋ. ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ 69ನೆಯ ಕೃತಿ, ‘ಪಂಚರೂಪಕಗಳು ಇದರ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ಕೋಟದಲ್ಲಿ ಜರಗಿತು. ಕೃತಿಯನ್ನು ರಂಗಕರ್ಮಿ ಪ್ರಭಾಕರ ತುಮುರಿಯವರು ಬಿಡುಗಡೆ ಮಾಡಿ ನಾಟಕಗಳು ನಡೆದು ಬಂದ ಹಾದಿಯನ್ನು ಸಮೀಕ್ಷಿಸುತ್ತ ಅದು ಹಿಡಿದ ಅಪಸವ್ಯಕ್ಕೆ ಉತ್ತರವಾಗಿ ಈ ಕೃತಿ ಮೂಡಿಬಂದಿದೆ ಎಂದರು. ನಾಟಕದ ರಂಗ ಪ್ರಯೋಗ ಸಾಧ್ಯತೆಯ ಕುರಿತು ಕಸಾಪ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಮೌಲ್ಯಗಳ ಕುರಿತು ಗಣೇಶ ಮೂರ್ತಿ ಹೆಬ್ಬಾರ, ವಸ್ತು ವಿಶೇಷದ ಬಗೆಗೆ ಸುಬ್ರಹ್ಮಣ್ಯ ಶೆಟ್ಟಿ ವಿವೇಚಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಮಹಾಲಕ್ಷೀ ಎಂ.ಪಿ ನಿರೂಪಣೆ, ಶ್ರೀದೇವಿಯಿಂದ ಪ್ರಾರ್ಥಿಸಿ, ಉಪೇಂದ್ರ ಸೋಮಯಾಜಿ ವಂದನಾರ್ಪಣೆ ಸಲ್ಲಿಸಿದರು. ಕೋಟದ ಮಿತ್ರ ಮಂಡಳಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ಪ್ರೋ. ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ 69ನೆಯ ಕೃತಿ, ‘ಪಂಚರೂಪಕಗಳು ಇದನ್ನು ಪ್ರಭಾಕರ ತುಮುರಿಯವರು ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ , ಉಪೇಂದ್ರ ಸೋಮಯಾಜಿ, ಕಸಾಪ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಇದ್ದರು.















Leave a Reply