ಕೋಟ: ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇವರ ಆಯೋಜನೆಯಲ್ಲಿ ಸಂಸ್ಥೆಯ ಪ್ರವರ್ತಕ ಆನಂದ ಸಿ. ಕುಂದರ್ ಅವರ ಮಾರ್ಗದರ್ಶನದಲ್ಲಿ ಮಣೂರು ಪಡುಕರೆ ಹಾಗೂ ಮಣಿಪಾಲ ದಂತ ವ್ಯೆದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಮಣೂರು ಪಡುಕರೆಯಲ್ಲಿ ಗುರುವಾರ ಉಚಿತ ದಂತ ತಪಾಸಣಾ ಶಿಬಿರ ಗುರುವಾರ ನಡೆಯಿತು.
ಶಿಬಿರದಲ್ಲಿ ಒಟ್ಟು ೬೨೫ ವಿದ್ಯಾರ್ಥಿಗಳ ದಂತ ಆರೋಗ್ಯ ತಪಾಸಣೆ ನಡೆಸಲಾಯಿತು. ವಿದ್ಯಾರ್ಥಿಗಳ ಹಲ್ಲು ಮತ್ತು ಬಾಯಿಯ ಆರೋಗ್ಯದ ಬಗ್ಗೆ ಸಮಗ್ರ ಪರೀಕ್ಷೆ ನಡೆಸಿದ ದಂತ ತಜ್ಞರು, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ವಿಧಾನ, ಸರಿಯಾದ ಬ್ರಷ್ ಮಾಡುವ ಕ್ರಮ, ಪೌಷ್ಟಿಕ ಆಹಾರದ ಮಹತ್ವ ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು. ಚಿಕಿತ್ಸೆ ಅಗತ್ಯವಿರುವ ವಿದ್ಯಾರ್ಥಿಗಳನ್ನು ಮುಂದಿನ ಚಿಕಿತ್ಸೆಗೆ ಗುರುತಿಸಿ ಸೂಕ್ತ ಸಲಹೆ ನೀಡಲಾಯಿತು.
ಸಂಯುಕ್ತ ಪ್ರೌಢ ಶಾಲೆಯ ಹಿರಿಯ ಶಿಕ್ಷಕರಾದ ರಾಮದಾಸ ನಾಯಕ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ವಿಜಯ ಅಲ್ತಾರು, ಶಾಲಾಭಿವ್ರದ್ದಿ ಸಮಿತಿಯ ಪ್ರೌಢ ವಿಭಾಗದ ನಾಗರಾಜ ಮತ್ತು ಪ್ರಾಥಮಿಕ ವಿಭಾಗದ ವಿನಯ್ ಹಾಗೂ ಗೀತಾನಂದ ಸಂಯೋಜಕರಾದ ರವಿಕಿರಣ್ ಕೋಟ,ದಿಕ್ಷೀತಾ ಇದ್ದರು. ಮಣಿಪಾಲ ದಂತ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಗೀತಾನಂದ ಫೌಂಡೇಶನ್ ಆಯೋಜನೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಮಣೂರು ಪಡುಕರೆಯಲ್ಲಿ ಗುರುವಾರ ನಡೆಯಿತು. ಸಂಯುಕ್ತ ಪ್ರೌಢ ಶಾಲೆಯ ಹಿರಿಯ ಶಿಕ್ಷಕರಾದ ರಾಮದಾಸ ನಾಯಕ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ವಿಜಯ ಅಲ್ತಾರು, ಶಾಲಾಭಿವ್ರದ್ದಿ ಸಮಿತಿಯ ಪ್ರೌಢ ವಿಭಾಗದ ನಾಗರಾಜ ಮತ್ತು ಪ್ರಾಥಮಿಕ ವಿಭಾಗದ ವಿನಯ್ ಇದ್ದರು.















Leave a Reply