ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ರಾಜ್ಯಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
“ನಾರಾಯಣ ಗುರುಗಳ ಜೀವನ ಮತ್ತು ತತ್ವದರ್ಶನಗಳು ಭಾರತೀಯ ಸಮಾಜಕ್ಕೆ ನೀಡಿದ ಕೊಡುಗೆ” ಎಂಬ ವಿಷಯದ ಮೇಲೆ ಸ್ಪರ್ಧೆ ನಡೆಯಲಿದೆ. ಪದವಿ ಪೂರ್ವ ಹಾಗೂ ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹15,000, ₹10,000 ಹಾಗೂ ₹5,000 ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಜೊತೆಗೆ ಉತ್ತಮ 10 ಸ್ಪರ್ಧಿಗಳಿಗೆ ವಿಶೇಷ ಪ್ರಶಂಸಾ ಪತ್ರ ನೀಡಲಾಗುತ್ತದೆ.
ಸ್ಪರ್ಧೆಗೆ ವಿಡಿಯೊ ಸಲ್ಲಿಸುವ ಕೊನೆಯ ದಿನಾಂಕ ಆಗಸ್ಟ್ 15, 2026 ಆಗಿದ್ದು, ನೋಂದಣಿ ಪ್ರಕ್ರಿಯೆ ಜುಲೈ 25, 2026ರಿಂದ ಆರಂಭವಾಗಲಿದೆ. ಸ್ಪರ್ಧಿಗಳು 3 ರಿಂದ 4 ನಿಮಿಷಗಳ ಅವಧಿಯ HD/Full HD ಗುಣಮಟ್ಟದ ಕನ್ನಡ ಭಾಷೆಯ ವಿಡಿಯೊವನ್ನು Google Drive, Google Form ಅಥವಾ WhatsApp ಮೂಲಕ ಕಳುಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 98447 33973, 78295 04709 ಅಥವಾ ಹೆಲ್ಪ್ಲೈನ್ ಸಂಖ್ಯೆ 99023 54807 ಅನ್ನು ಸಂಪರ್ಕಿಸಲು ಆಯೋಜಕರು ತಿಳಿಸಿದ್ದಾರೆ.















Leave a Reply