ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಎನ್. ಸಿ.ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ. ) ಬಂಕೇರಕಟ್ಟ ಅಂಬಲಪಾಡಿ 2026-2028ನೇ ಸಾಲಿನ ನೂತನ ಸಮಿತಿಯ ಪದಗ್ರಹಣ ಸಮಾರಂಭ

ಸಂಸ್ಥೆಯ ನೂತನ ಸಮಿತಿಯ ಪದಗ್ರಹಣ ಸಮಾರಂಭ ನಡೆಯಿತು. ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ನಮ್ಮ ಸಂಸ್ಥೆಯ ಕಾರ್ಯದರ್ಶಿ ರೂಪೇಶ್ ಪ್ರಸ್ತಾಪಿಸಿ ಸ್ವಾಗತ ಕೋರಿದರು. ನಂತರ ನೂತನ ಅಧ್ಯಕ್ಷರಾದ ಕಾರ್ತಿಕ್ ಪೂಜಾರಿ ಹಾಗೂ ನಾಗರಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾದ ಶಿವಾಜಿ ಸನಿಲ್ ಇವರನ್ನು ಅಭಿನಂದಿಸಲಾಯಿತು.

ವಾರ್ಷಿಕೋತ್ಸವದ ಸಂದರ್ಭದಲ್ಲಿ ಅನುಪಸ್ಥಿತರಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ನಮ್ಮ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿಗಳಾದ ಕಾರ್ತಿಕ್ ಎಸ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ನಮ್ಮ ಸಂಸ್ಥೆಯ ಸಂಘಟನಾ ಕಾರ್ಯದರ್ಶಿಯಾದ ನವೀನ್ ಸುವರ್ಣ ರವರು “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ದ ಬಗ್ಗೆ ಪ್ರಸ್ತಾಪಿಸಿದರು. ಸಮಿತಿಯ ನಿರ್ಣಯದಂತೆ ದಿನಾಂಕ 05/07/2026 ರ ರವಿವಾರ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ಆಯೋಜಿಸುವುದಾಗಿ ನಿರ್ಧರಿಸಲಾಯಿತು.

ನಮ್ಮ ಸಂಸ್ಥೆಯ ಗೌರವ ಸಲಹೆಗರರಾದ ರಾಜೇಶ್ ಸುವರ್ಣ ರ ಸಲಹೆಯಂತೆ ಎಲ್ಲಾ ಸದಸ್ಯರು ತಮ್ಮಿಚ್ಚೆಯoತೆ ಹಣಕಾಸಿನ ವ್ಯವಸ್ಥೆ ಮಾಡುವುದಾಗಿ ಎಲ್ಲರ ಒಪ್ಪಿಗೆಯಂತೆ ನಿರ್ಣಯಿಸಲಾಯಿತು. ಕಾರ್ಯಕ್ರಮ ಆಯೋಜನೆಗೆ ಗದ್ದೆಯ ವ್ಯವಸ್ಥೆಯನ್ನು ನಾಗರಾಜ ಸೇವಾ ಸಮಿತಿಯ ಗೌರವಧ್ಯಕ್ಷರಾದ ವಿಶ್ವನಾಥ ಹೆಗ್ಡೆ ಯವರು ಮಾಡಿಕೊಡುವುದಾಗಿ ಹೇಳಿದರು.

ಮುಂದಿನ ಮಾನ್ಸೂನ್ ಟ್ರೋಫಿ ಆಯೋಜನೆಯ ಬಗ್ಗೆ ಕೋಶಾಧಿಕಾರಿಗಳಾದ ಪ್ರಸನ್ನ ಶ್ರೀಯಾನ್ ಹಾಗೂ ಕಾರ್ತಿಕ್ ಪೂಜಾರಿಯವರು ಪ್ರಸ್ತಾಪಿಸಿದರು. ಮಾಜಿ ಅಧ್ಯಕ್ಷರಾದ ಕಿರಣ್ ಪೂಜಾರಿ ಯವರು ತಂಡದ ಬೆಳವಣಿಗೆ ಬಗ್ಗೆ ಹಿತವಚನ ನೀಡಿದರು. ನಂತರ ನಮ್ಮ ಸಂಸ್ಥೆಯ ಹಾಲಿ ಅಧ್ಯಕ್ಷರಾದ ಕಾರ್ತಿಕ್ ಪೂಜಾರಿ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು.

ನಮ್ಮ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಯತೀಶ್ ಸುವರ್ಣ ರವರು ಧನ್ಯವಾದ ಸಮರ್ಪಿಸಿದರು. ಕೆಸರ್ಡ್ ಒಂಜಿ ದಿನ ಕಾರ್ಯಕ್ರಮಕ್ಕೆ ನಾಗರಾಜ ಸೇವಾ ಸಮಿತಿ & ನಾಗರಾಜ ಮಹಿಳಾ ಸಮಿತಿ ಸಹಕಾರದ ಬಗ್ಗೆ ನಿರ್ಧರಿಸಲಾಯಿತು.

Leave a Reply

Your email address will not be published. Required fields are marked *