ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕುಂದಾಪುರ -2 ತಾಲೂಕು ತೆಕ್ಕಟ್ಟೆ ವಲಯದ ತೆಕ್ಕಟ್ಟೆ ಕಾರ್ಯಕ್ಷೇತ್ರದಲ್ಲಿ ವಿಶ್ವ ತಂಬಾಕು ವಿರೋಧ ದಿನಾಚರಣೆಯನ್ನು ,(ತಂಬಾಕು ಮುಕ್ತ ಭಾರತ,) ತೆಕ್ಕಟ್ಟೆ ಶಿಶು ಮಂದಿರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅವರು ಭಾಗವಹಿಸಿದ್ದು ತಂಬಾಕು ಸೇವನೆಯಿಂದ ಬರಬಹುದಾದ ಕಾಯಿಲೆಗಳು ಮತ್ತು ಅದರಿಂದಾಗುವ ದುಷ್ಪರಿಣಾಮಗಳು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅವರು ಇಂದಿನ ವಾತಾವರಣದಲ್ಲಿ ತಂಬಾಕು ಮುಕ್ತರಾಗಿ ಹೇಗೆ ಉತ್ತಮ ಭಾರತೀಯ ಪ್ರಜೆಯಾಗಿ ಬಾಳಬೇಕು ಹೇಗೆ ಜೀವನ ಮಾಡಬೇಕು ಅವರನ್ನು ಯಾವ ರೀತಿ ಪಾಲನೆ ಪೋಷಣೆ ಮಾಡಿದರೆ ದುಶ್ಚಟಗಳಿಂದ ಮುಕ್ತರನ್ನಾಗಿಸಬೇಕು ಎಂದು ಪೋಷಕರಿಗೆ ಕಿವಿ ಮಾತನ್ನು ಹೇಳಿದರಲ್ಲದೆ ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಇದುವರೆಗೆ ದೊರಕಿದ ಹಾಗೂ ಮುಂದೆ ದೊರಕಲಿರುವ ವಿಶೇಷ ಸೌಲಭ್ಯಗಳ ಬಗ್ಗೆ ಹಾಗೂ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಕುಂದಾಪುರ -2 ತಾಲೂಕಿನ ಯೋಜನಾಧಿಕಾರಿ ಸುಧೀರ್ ಹಂಗಳೂರು ಇವರು ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ಹಾಗೆ ಸಿಗಬಹುದಾದ ಸೌಲಭ್ಯಗಳು ಅನುದಾನಗಳು ಹಾಗೂ ಅದರಿಂದ ಸದಸ್ಯರು ವೈಯಕ್ತಿಕ ವ್ಯಕ್ತಿತ್ವ ಕೌಟುಂಬಿಕ ಅಭಿವೃದ್ಧಿ ಗಳು ಸಮುದಾಯದ ಅಭಿವೃದ್ಧಿಗೆ ಯಾವ ರೀತಿ ಪ್ರೇರೇಪಣೆ ನೀಡಿದೆ ಎಂಬುದರ ಕುರಿತು ಉದಾಹರಣೆಯೊಂದಿಗೆ ವಿವರಿಸುತ್ತ ವಿಶ್ವ ತಂಬಾಕು ವಿರೋಧ ದಿನಾಚರಣೆಯನ್ನು ಪೂಜ್ಯರು ದೇಶಾದ್ಯಂತ ಆಚರಣೆ ಮಾಡಲು ಇರುವ ಧ್ಯೇಯೋದ್ದೇಶಗಳನ್ನು ಅವರ ಆಶಯಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಗೂ ಒಕ್ಕೂಟದ ಅಧ್ಯಕ್ಷ ರಾಜೇಶ್ ಕಾಂಚನ್ ಅವರು ಗ್ರಾಮಾಅಭಿವೃದ್ಧಿ ಯೋಜನೆಗಯಿಂದ ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಹಾಗೂ ಒಕ್ಕೂಟದಲ್ಲಿ ಯಾವ ರೀತಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ತಮ್ಮ ಅನುಭವ ಹಂಚಿಕೊoಡರು ನಿಕಟಪೂರ್ವ ವಲಯದ ಅಧ್ಯಕ್ಷ ರಮೇಶ್ ಆಚಾರ್ಯ ಕಾರ್ಯಕ್ರಮದ ದ್ಯೆಯೋದ್ದೇಶ ಹಾಗೂ ಯೋಜನೆ ನಡೆದು ಬಂದ ಹಾದಿ ಕುರಿತು ತಮಗೆ ಆದ ಅನುಭವ ಹಾಗೂ ಅಭಿವೃದ್ಧಿಯ ಕುರಿತು ತಮ್ಮ ಆಶಯವನ್ನು ತಿಳಿಸಿದರು. ಯೋಜನೆಯ ಅದ್ಭುತ ಕಾರ್ಯಕ್ರಮಗಳಲ್ಲಿ ಒಂದಾದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಫಲಾನುಭವಿಗಳಿಗೆ ನೊಂದಾವಣೆ ಕಾರ್ಡನ್ನು ವಿತರಿಸಲಾಯಿತು.
ತೆಕ್ಕಟ್ಟೆ ವಲಯದ ಮೇಲ್ವಿಚಾರಕರಾದ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಉಷಾ ಸ್ವಾಗತಿಸಿ ಸಾರಿಕಾ ವಂದಿಸಿದರು. ಈ ಸಂದರ್ಭ ಸ್ಥಳೀಯ ತಂಡದ ಸದಸ್ಯರು ಪದಾಧಿಕಾರಿಯವರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕುಂದಾಪುರ -2 ತಾಲೂಕು ತೆಕ್ಕಟ್ಟೆ ವಲಯದ ತೆಕ್ಕಟ್ಟೆ ಕಾರ್ಯಕ್ಷೇತ್ರದಲ್ಲಿ ವಿಶ್ವ ತಂಬಾಕು ವಿರೋಧ ದಿನಾಚರಣೆಯನ್ನು ,(ತಂಬಾಕು ಮುಕ್ತ ಭಾರತ,) ತೆಕ್ಕಟ್ಟೆ ಶಿಶು ಮಂದಿರದಲ್ಲಿ ಆಚರಿಸಲಾಯಿತು. ಕುಂದಾಪುರ -2 ತಾಲೂಕಿನ ಯೋಜನಾಧಿಕಾರಿ ಸುಧೀರ್ ಹಂಗಳೂರು, ಒಕ್ಕೂಟದ ಅಧ್ಯಕ್ಷ ರಾಜೇಶ್ ಕಾಂಚನ್, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ನಿಕಟಪೂರ್ವ ವಲಯದ ಅಧ್ಯಕ್ಷ ರಮೇಶ್ ಆಚಾರ್ಯ ಇದ್ದರು.















Leave a Reply