ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜೂ.14ಕ್ಕೆ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ಐದನೇ ಕಾಲಮಿತಿಯ ಸಾಹಿತ್ಯ ಸಮ್ಮೇಳನ

ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ನೆನಪು ಮೂವೀಸ್ ಕೋಟ ಮತ್ತು ಉಸಿರು ಕೋಟ ಇವರ ಸಾರಥ್ಯದಲ್ಲಿ ಐದನೇ ಕಾಲಮಿತಿಯ ಸಾಹಿತ್ಯ ಸಮ್ಮೇಳನ ಜೂನ್.14ರ ಭಾನುವಾರ ಮಧ್ಯಾಹ್ನ ಎರಡು ಗಂಟೆಯಿoದ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಕೋಟದ ಕಾರಂತ ಥೀಮ್ ಪಾರ್ಕ್ ನಡೆಯಲಿದೆ.

ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ, ಪುರುಷರಿಗೆ, ಮತ್ತು ಮಹಿಳೆಯರಿಗೆ ಪ್ರತ್ಯೇಕ ಚುಟುಕು ಗೋಷ್ಠಿಗಳಿದ್ದು ಭಾಗವಹಿಸಲು ಇಚ್ಚಿಸುವವರು ಈ ಕೆಳಗಿನ ನಂಬರ್ಗಳಿಗೆ ತಮ್ಮ ಹೆಸರನ್ನು ನೊಂದಾಯಿಸುವುದು. ವಿದ್ಯಾರ್ಥಿಗಳು ಮಂಜುನಾಥ ಗುಂಡ್ಮಿ 9902663747, ಪುರುಷರು ಚೇಂಪಿ ದಿನೇಶ್ ಆಚಾರ್ಯ 9900476706, ಮಹಿಳೆಯರು ಸುಮನ ಹೇರ್ಳೆ 9448744140 ಅವರಲ್ಲಿ ಮೇ 31 ರ ಒಳಗೆ ಹೆಸರನ್ನು ನೊಂದಾಯಿಸಿಕೊಳ್ಳುವoತೆ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಪಂಚಾಯತ್ ಪಿಡಿಓ ರವೀಂದ್ರ ರಾವ್, ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಆಡಳಿತಾಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ, ಯೋಜನೆಯ ಸಂಚಾಲಕರಾದ ಸತೀಶ್ ವಡ್ಡರ್ಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *