ಕುಂದಾಪುರ: ತೆಕ್ಕಟ್ಟೆ ಗ್ರಾಮದ ರಾಘವೇಂದ್ರ (29) ಅವರ ಸಹೋದರ ರಂಜಿತ್ ಮೇಲೆ ನಡೆದ ಕ್ರೂರ ಹಲ್ಲೆ ಪ್ರಕರಣವು ಕುಂದಾಪುರ ಭಾಗದಲ್ಲಿ ಆತಂಕ ಮೂಡಿಸಿದೆ. ದಿನಾಂಕ 17/05/2026 ರಾತ್ರಿ ಸುಮಾರು 10:00 ಗಂಟೆಗೆ, ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ರಂಜಿತ್ ಮಳೆ ಕಾರಣದಿಂದ ಕುಂಬಾಶಿ ಕೊರವಡಿ ಪ್ರದೇಶದಲ್ಲಿರುವ ಶ್ರೀ ಸಿದ್ದಿ ಜನರಲ್ ಸ್ಟೋರ್ ಎದುರು ಬೈಕ್ ನಿಲ್ಲಿಸಿಕೊಂಡಿದ್ದರು. ಇದೇ ವೇಳೆ ಆಪಾದಿತರಾದವಿಕಾಸ್ ಪೂಜಾರಿ, ಶರತ್ ಪೂಜಾರಿ, ಮಹೇಂದ್ರ ಪೂಜಾರಿ, ಸುಕೇಶ್ ಪೂಜಾರಿ, ಅಭಿಲಾಷ್ ಪೂಜಾರಿ, ಮಂಜುನಾಥ ಹಾಗೂ ಸಂದೇಶ್ ಸೇರಿ ಗುಂಪಾಗಿ ರಂಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸೋಡಾ ಬಾಟಲಿ ಹಾಗೂ ಹೆಲ್ಮೆಟ್ ಬಳಸಿ ಹಲ್ಲೆ ಮಾಡಿದ ಪರಿಣಾಮ ರಂಜಿತ್ ಅವರ ತುಟಿ ಹಾಗೂ ದವಡೆಗೆ ಗಂಭೀರ ರಕ್ತಗಾಯಗಳಾಗಿವೆ. ಬಳಿಕ ಪಿರ್ಯಾದಿದಾರ ರಾಘವೇಂದ್ರ ಸ್ಥಳಕ್ಕೆ ಬಂದು ತಮ್ಮನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ದಿನಾಂಕ 18/05/2026 ಬೆಳಿಗ್ಗೆ ರಂಜಿತ್ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ನಂತರ ಅವರನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ರಂಜಿತ್ ಹಾಗೂ ಆರೋಪಿತರ ನಡುವೆ ಇದ್ದ ಹಳೆಯ ದ್ವೇಷವೇ ಈ ಘಟನೆಯ ಮೂಲ ಕಾರಣ ಎಂದು ತಿಳಿದುಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2026 ರಂತೆ ಪ್ರಕರಣ ದಾಖಲಾಗಿದ್ದು, ಕಲಂಗಳು: 189(2), 191(2), 191(3), 126(2), 109, 352 ಜೊತೆಗೆ 190 BNS ಅಡಿಯಲ್ಲಿ ತನಿಖೆ ಮುಂದುವರಿದಿದೆ.














Leave a Reply