ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೇಸಿಗೆ ಶಿಬಿರಗಳು ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲಿ- ಪ್ರೇಮಾನಂದ ಶೆಟ್ಟಿ

ಕೋಟ ಪಂಚಾಯತ್ ನಲ್ಲಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಹೇಳಿಕೆಕೋಟ: ಬೇಸಿಗೆ ಶಿಬಿರಗಳು ಬರೇ ರಜಾ ಶಿಬಿರಗಳಾಗದೆ ಮಕ್ಕಳ ಮನೋವಿಕಾಸದ ಜೊತೆ ಸುಸಂಸ್ಕೃತರನ್ನಾಗಿಸಲಿ ಎಂದು ಸಮಾಜಸೇವಕ ಕಟ್ಕೇರೆ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.

ಶನಿವಾರ ಕೋಟ ಪಂಚಾಯತ್ ಸಭಾಂಗಣದಲ್ಲಿ ಕೋಟ ಗ್ರಾಮಪಂಚಾಯತ್ ,ಅರಿವು ಡಿಜಿಟಲ್ ಗ್ರಂಥಾಲಯ ಕೇಂದ್ರ ಕೋಟ,ಪಂಚವರ್ಣ ಸಂಘಟನೆ ಕೋಟ,ಇಂಡಿಕಾ ಕಲಾ ಬಳಗ ಪಡುಕರೆ,ಪ್ರಕೃತಿ ಸಂಜೀವಿನಿ ಸಂಘ ಕೋಟ ಪಂಚಾಯತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹಿರಿ ಕಿರಿಯರ ಬಗ್ಗೆ ಗೌರವ ಕುಂಠಿತಗೊoಡಿದೆ ಇದಕ್ಕೆ ಈಗಿನ ವ್ಯವಸ್ಥೆಯೇ ಕಾರಣವೇ ಅಥವಾ ಪೋಷಕರಿಂದಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಪೋತ್ಸಾಹಿಸುವುದರೊಂದಿಗೆ ಸಂಸ್ಕಾರಭರಿತರನ್ನಾಗಿಸಿ ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ಐದು ದಿನಗಳಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಾಗರತ್ನ ಉಡುಪ, ಜಯಲಕ್ಷ್ಮಿ, ವಸಂತಿ ,ಪ್ರಜ್ಞಾ ಹಂದಟ್ಟು ಇವರುಗಳನ್ನು ಗೌರವಿಸಲಾಯಿತು. ಸಭೆಯಲ್ಲಿ ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪ್ರಕೃತಿ ಸಂಜೀವಿನಿ ಸoಘದ ಮಾಲತಿ ಶೇಖರ್ ಉಪಸ್ಥಿತರಿದ್ದರು.

ಅರಿವು ಡಿಜಿಟಲ್ ಗ್ರಂಥಾಲದ ಗ್ರಂಥಪಾಲಕಿ ಜ್ಯೋತಿ ಗಿಳಿಯಾರು ಸ್ವಾಗತಿಸಿ, ಪಂಚವರ್ಣದ ಸುಜಾತ ಬಾಯರಿ ನಿರೂಪಿಸಿ, ಪಂಚಾಯತ್ ಪಿಡಿಒ ಉಮೇಶ್ ವಂದಿಸಿದರು. ಕೋಟ ಪಂಚಾಯತ್ ಸಭಾಂಗಣದಲ್ಲಿ ಐದು ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸoಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಾಗರತ್ನ ಉಡುಪ, ವಿಜಯಲಕ್ಷ್ಮಿ, ವಸಂತಿ , ಪ್ರಜ್ಞಾ ಹಂದಟ್ಟು ಇವರುಗಳನ್ನು ಗೌರವಿಸಲಾಯಿತು.

ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪ್ರಕೃತಿ ಸಂಜೀವಿನಿ ಸoಘದ ಮಾಲತಿ ಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *