ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಡಿ ಕನ್ಯಾಣದ ಭಾಗದಲ್ಲಿ ನೂರಾರು ಎಕ್ಕರೆ ಕೃಷಿ ಭೂಮಿಗೆ ಸೀತಾನದಿಯ ಉಪ್ಪು ನೀರು ನುಗ್ಗಿ ಬಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿದ್ದು ಈ ಹಿನ್ನಲ್ಲೆಯಲ್ಲಿ ಅಲ್ಲಿನ ಕೃಷಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ನೂರಾರು ಎಕ್ಕರೆ ಭೂ ಭಾಗದಲ್ಲಿ ಭತ್ತ,ಉದ್ದು,ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದು ಇದೀಗ ದಿನಪ್ರತಿಯಂತೆ ಉಪ್ಪು ನೀರು ನುಗ್ಗಲ್ಪಡುತ್ತಿದ್ದು ಇದರಿಂದ ಕೃಷಿಕರು ವಿಮುಖರಾಗುತ್ತಿದ್ದೇವೆ, ಕೃಷಿಯನ್ನೆ ಅವಲಂಬಿತರಾಗಿದ್ದ ನಾವುಗಳು ಈ ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿಯೂ ಪ್ರಯೋಜನ ಶೂನ್ಯವಾಗಿದೆ.
ಇನ್ನೊಂದು ವಾರದಲ್ಲಿ ಈ ಬಗ್ಗೆ ಏನಾದರೂ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮಸ್ಥರೆ ದೊಡ್ಡ ಮಟ್ಟದ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಸಿದರು. ನಿರ್ಲಕ್ಷದ ವಿರುದ್ಧ ಬೇಸರಈ ವೇಳೆ ಕೃಷಿಕರಾದ ಲಕ್ಷ್ಮಿ ಮರಕಾಲ್ತಿ ಮಾತನಾಡಿ ರಸ್ತೆ ಸೇರಿದಂತೆ ಬೇರೆ ಬೇರೆ ಕಾಮಗಾರಿಗಳಿಗೆ ಸಾಕಷ್ಟು ಹಣ ವ್ಯಯಿಸುವ ಸರಕಾರ ದೇಶದ ಆರ್ಥಿಕತೆ ಮೂಲವಾದ ಕೃಷಿಕರಿಗೆ ಮೂಲಭೂತವಾಗಿ ಬೇಕಾಗುವ ಸೌಕರ್ಯ ನೀಡಲು ವಿಫಲವಾಗುತ್ತಿರುವುದನ್ನು ಪ್ರತಿಭಟನೆಯಲ್ಲಿ ಒತ್ತಿ ಹೇಳಿದರು.
ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಿಸೀತಾ ನದಿಯಲ್ಲಿ ಕಾಂಡ್ಲ ವನವನ್ನು ಸೃಷ್ಠಿಸಿದ್ದಾರೆ ಇದ್ಯಾಕೆ ಈ ರೀತಿ ಕೃಷಿಕರಿಗೆ ಹಾನಿಗೈಯುವುದಕ್ಕೆ ಈ ರೀತಿ ಸೃಷ್ಠಿಸಿದರೇ ಎಂಬ ಅನುಮಾನ ಕಾಡುತ್ತಿದೆ ಇದರಿಂದ ನದಿ ತಟದಲ್ಲಿ ನೀರು ಸರಾಗವಾಗಿ ಹೋಗುತ್ತಿಲ್ಲ ಇನ್ನೊಂದು ಈ ಸಮಸ್ಯೆಗೆ ಹೊಳೆ ತಟಕ್ಕೆ ಶಾಶ್ವತ ತಡೆದಂಡೆ ನಿರ್ಮಿಸಿ ಕೃಷಿಕರಿಗೆ ಅನುಕೂಲಕರ ವಾತಾವರಣ ನೀಡಲಿ ಎಂದು ಸ್ಥಳೀಯ ಕೃಷಿಕ ಬಚ್ಚ ಪೂಜಾರಿ ಹೇಳಿದರು.
ಸುದಿನ ಕೋಡಿ, ರಾಜೇಶ್ ಉಪಾಧ್ಯ, ಅನಂತ್ ಹೊಳ್ಳ, ಮಹೇಶ್ ಉಪಾಧ್ಯ, ಪ್ರಕಾಶ್ ನಾವಡ, ರಘುರಾಮ್ (ಮಂಗ್ಳು), ಲಕ್ಷ್ಮಣ ಪೂಜಾರಿ, ಹರ್ಷ ಪೂಜಾರಿ, ಸುಮತಿ ಪೂಜಾರ್ತಿ, ವಾಸು ಪೂಜಾರಿ, ರಾಮ ಪೂಜಾರಿ ಹಾಗೂ ಸ್ಥಳೀಯರು ಇದ್ದರುಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ ಹಾನಿ ಕೋಡಿ ಕನ್ಯಾಣದಲ್ಲಿ ಕೃಷಿಕರಿಂದ ಪ್ರತಿಭಟನೆ ನಡೆಯಿತು. ಸುದಿನ ಕೋಡಿ, ರಾಜೇಶ್ ಉಪಾಧ್ಯ, ಅನಂತ್ ಹೊಳ್ಳ, ಮಹೇಶ್ ಉಪಾಧ್ಯ, ಪ್ರಕಾಶ್ ನಾವಡ, ರಘುರಾಮ್ ಇದ್ದರು.














Leave a Reply