ಕೋಟ: ಕಿಟಕಿ ಪಕ್ಕ ನಿಂತ ಹುಡುಗಿ ಅದ್ಭುತ ಕಥೆಯನ್ನಾಧರಿಸಿದ ನಾಟಕ. ಎಷ್ಟೋ ಶಿಕ್ಷಕರ ಶಿಕ್ಷಣವನ್ನು ಆಯಾಮಗಳನ್ನು ಬದಲಾಯಿಸಿಕೊಂಡ ಕಥೆ. ಮಕ್ಕಳ ಮೂಲಕ ಡಾ. ಶ್ರೀಪಾದ ಭಟ್ಟರು ಸುಧಾ ಆಡುಕುಳರ ನಾಟಕವನ್ನು ಕೈಗೆತ್ತಿಕೊಂಡು ರಂಗ ಪ್ರಯೋಗಗೊಳಿಸಿದ್ದು ನಿಜಕ್ಕೂ ಸ್ತುತ್ಯರ್ಹ. ರಂಗಭೂಮಿಯ ನಾಟಕಗಳನ್ನು ಕರಾವಳಿಯಲ್ಲಿ ಅತ್ಯಧಿಕ ಸಂಖ್ಯೆ ಸಂಘಟನೆಗಳು ಆಯೋಜಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ. ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳು ಯಥೇಚ್ಚವಾಗಿ ಕಂಡುಬರುತ್ತಿರುವುದು ಸಮಾಜದ ಬೆಳವಣಿಗೆ ಎಂದು ರಂಗ ನಿರ್ದೇಶಕ ಸದಾನಂದ ಬೈಂದೂರು ಸಮಾರೋಪ ಭಾಷಣಗೈದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ ಮಾರ್ಚ್ 2ರಂದು ರಂಗೋತ್ಸವ ಸಮಾರೋಪದಲ್ಲಿ ಎಸ್. ಎಮ್. ಎಸ್. ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ ಅಭಿನಯಿಸಿದ ಮಕ್ಕಳ ನಾಟಕ ‘ಕಿಟಕಿ ಪಕ್ಕ ನಿಂತ ಹುಡುಗಿ’ ನಾಟಕ ಪ್ರಸ್ತುತಿಯ ಸಂದರ್ಭ ಸದಾನಂದ ಬೈಂದೂರು ಮಾತನ್ನಾಡಿದರು.
ಪ್ರಾಂಶುಪಾಲರಾದ ಸುಶೀಲ ಹೊಳ್ಳ, ಲೇಖಕಿ ಶೋಭಾ ಅರಸ್, ಧಮನಿ ಟ್ರಸ್ಟ್ ಅಧ್ಯಕ್ಷೆ ಸುಲೋಚನಾ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ನಿರೂಪಣೆಗೈದರು. ಶ್ರೀಶ ಭಟ್ ಧನ್ಯವಾದಗೈದರು.

Leave a Reply