ಬ್ರಹ್ಮಾವರ: ಸಿದ್ಧಿವಿನಾಯಕ ದೇವಸ್ಥಾನ ಕುಮ್ರಗೋಡಿನಲ್ಲಿ ಆದಿತ್ಯವಾರ ಸಂಜೆ ಸಿತಾರ ಬೋಟಿಂಗ್ ನವರ ನೂತನವಾದ ಪಾರ್ಟಿ ಕ್ರೂಸ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಉಡುಪಿ ಜಿಲ್ಲಾ ಶಾಸಕರಾದ ಶ್ರೀಯುತ ಕಿರಣ್ ಕುಮಾರ್ ಕೊಡ್ಗಿಯವರು ಆಗಮಿಸಿ ಪಾರ್ಟಿ ಕ್ರೂಸ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪಾರ್ಟಿ ಕ್ರೂಸ್ ನಲ್ಲಿ ಒಟ್ಟು 50 ಜನರು ಸಂಚರಿಸುವ ಸಾಮಾರ್ಥ್ಯವನ್ನು ಹೊಂದಿದ್ದು ಗ್ರಾಹಕರಿಗಾಗಿ ಹಗಲು ಮತ್ತು ರಾತ್ರಿಗೆ ಸಂಬಂಧಿಸಿದಂತೆ ಪ್ಯಾಕೇಜ್ ಅನ್ನು ಪರಿಚಯಿಸಲಾಗಿದ್ದು ಅಡುಗೆ ಮನೆ, ಡೈನಿಂಗ್ ಟೇಬಲ್ ವ್ಯವಸ್ಥೆ ಹಾಗೂ ವಾಶ್ ರೂಮ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದರ ಜೊತೆಯಲ್ಲಿ ಗ್ರಾಹಕರ ಸುರಕ್ಷತೆಯ ಹಿತದೃಷ್ಟಿಯಿಂದ ಲೈಫ್ ಜಾಕೆಟ್ ಹಾಗೂ ಅಗ್ನಿ ನಿರೋಧಕವನ್ನು ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಯೋಗ್ಯವಾಗಿದೆ.

ಈ ಸಂದರ್ಭದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು, ಸಿತಾರ ಬೋಟಿಂಗ್ ಮಾಲೀಕರಾದ ರಮೇಶ್ ಸಿತಾರ ಹಾಗೂ ನಿತೀನ್ ಚಂದನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಳ್ಕುದ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರರಾದ ಶ್ರೀಯುತ ಶ್ರೀಕಾಂತ್ ಸಾಮಾಂತ್ ರವರು ನಿರೂಪಿಸಿ ವಂದಿಸಿದರು.












Leave a Reply