ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ಮತ್ತು ಕಾರ್ಕಡ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ ಬ್ರಹ್ಮವಾರ ತಾಲೂಕು ಪಾಂಡೇಶ್ವರ ಮತ್ತು ಕಾರ್ಕಡ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ ಗುಂಡ್ಮಿ ಹಂದೆ ಹಾಲ್‌ನಲ್ಲಿ ಕಾರ್ಯಕ್ರಮ ನೆಡೆಸಲಾಯಿತು.

ಕಾರ್ಯಕ್ರಮವನ್ನು ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪ್ರಕಾಶ್ ಹೊಳ್ಳ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಹಲವಾರು ಕಾರ್ಯಕ್ರಮಗಳು ತುಂಬಾ ಯಶಸ್ವಿಯಾಗಿ ನೆಡೆಯತ್ತಿದೆ ಅದರಲ್ಲಿ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಅರ್ಥಪೂರ್ಣ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಒಕ್ಕೂಟದ ಪದಾಧಿಕಾರಿಗಳಿಗೆ ಸಂಘಗಳ ವಾರದ ಸಭೆಯ ಮಹತ್ವ, ದಾಖಲಾತಿಗಳ ನಿರ್ವಹಣೆ, ಒಕ್ಕೂಟದ ಬಲವರ್ಧನೆ, ಯೋಜನೆಯ ಮೂಲ ಉದ್ದೇಶ, ಬ್ಯಾಂಕಿoಗ್ ವ್ಯವಹಾರಗಳು, ಸಾಲದ ವಿಧಾನಗಳು, ಲೀಡ್ ಆಪ್, ಸಿಸಿ ಖಾತೆಗಳ ಬಗ್ಗೆ, ಪದಾಧಿಕಾರಿಗಳಿಗೆ ಜವಾಬ್ದಾರಿಗಳ ಬಗ್ಗೆ ಎರಡು ಒಕ್ಕೂಟದ ಪದಾಧಿಕಾರಿಗಳಿಗೆ ಸವಿವರವಾಗಿ ಮನಮುಟ್ಟುವಂತೆ ಮಾಹಿತಿಯನ್ನು ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮವಾರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ ಕೆ ಒಕ್ಕೂಟದ ಪದಾಧಿಕಾರಿಗಳಿಗೆ ಬಡ್ಡಿ ಲೆಕ್ಕಾಚಾರ, ಮಾಸಿಕ ವರದಿ, ಪಿಆರ್‌ಕೆ ವಿಧಾನ ಮರುಪಾವತಿ ಚೀಟಿಯ, ದಾಖಲಾತಿಗಳ, ಬಗ್ಗೆ ಮಾಹಿತಿಯನ್ನು ಪದಾಧಿಕಾರಿಗಳಿಗೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಡ್ಮಿ ಒಕ್ಕೂಟದ ಅಧ್ಯಕ್ಷ ಜಗದೀಶ್ ಆಚಾರ್ಯ ವಹಿಸಿದರು, ಶೌರ್ಯ ತಂಡದ ಕ್ಯಾಪ್ಟನ್ ಕಾಳಿಂಗ ಪೂಜಾರಿ, ಒಕ್ಕೂಟಗಳ ಅಧ್ಯಕ್ಷರುಗಳಾದ ನಾಗೇಶ್ ಸಾಸ್ತಾನ, ವಿಜಯಲಕ್ಷ್ಮಿ ಕಾವಡಿ, ಮತ್ತು ಕೊಡಿ, ಐರೋಡಿ, ಕಾವಡಿ, ಯಡಬೆಟ್ಟು, ಗುಂಡ್ಮಿ, ಸಾಸ್ತಾನ, ಕಾರ್ಕಡದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳಾದ, ರಮೇಶ್, ಶೋಭಾ, ಶಶಿಕಲಾ, ಜ್ಯೋತಿ, ಮಾಲತಿ, ಶಾರದ ಉಪಸ್ಥಿತರಿದ್ದರು. ತಾಲೂಕಿನ ಕೃಷಿ ಮೇಲ್ವಿಚಾರಕ ರಾಘವೇಂದ್ರ ಸ್ವಾಗತಿಸಿದರು.

ವಲಯದ ಮೇಲ್ವಿಚಾರಕರಾದ ಜಗದೀಶ್ ಎಂ ನಿರೂಪಿಸಿ, ವಂದಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ ಬ್ರಹ್ಮವಾರ ತಾಲೂಕು ಪಾಂಡೇಶ್ವರ ಮತ್ತು ಕಾರ್ಕಡ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ ಗುಂಡ್ಮಿ ಹಂದೆ ಹಾಲ್‌ನಲ್ಲಿ ಕಾರ್ಯಕ್ರಮವನ್ನು ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪ್ರಕಾಶ್ ಹೊಳ್ಳ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುಂಡ್ಮಿ ಒಕ್ಕೂಟದ ಅಧ್ಯಕ್ಷ ಜಗದೀಶ್ ಆಚಾರ್ಯ ವಹಿಸಿದರು, ಶೌರ್ಯ ತಂಡದ ಕ್ಯಾಪ್ಟನ್ ಕಾಳಿಂಗ ಪೂಜಾರಿ, ಒಕ್ಕೂಟಗಳ ಅಧ್ಯಕ್ಷರುಗಳಾದ ನಾಗೇಶ್ ಸಾಸ್ತಾನ, ವಿಜಯಲಕ್ಷ್ಮಿ ಕಾವಡಿ ಇದ್ದರು.

Leave a Reply

Your email address will not be published. Required fields are marked *