ಎಸ್ ಎಂ ಎಸ್ ಪಿ ಸಂಸ್ಕೃತ ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯ 81 ವಿದ್ಯಾರ್ಥಿಗಳಿಗೆ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಇವರ ಆಯೋಗದಲ್ಲಿ ಭೀಮ ಜ್ಯುವೆಲ್ಲರ್ಸ್ ಉಡುಪಿ ಇವರಿಂದ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ನ ಉನ್ನತ ಅಧಿಕಾರಿಯಾದ ಗುರುಪ್ರಸಾದ್ ಸರ್ ಮತ್ತು ಭೀಮ ಜ್ಯುವೆಲರ್ಸ್ ನ ಅಧಿಕಾರಿಯಾದ ಪೆರಂಪಳ್ಳಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಲತಾ ಕೃಷ್ಣನ್ ಕುಟುಂಬದವರನ್ನು ಸ್ಮರಿಸುತ್ತಾ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ನ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಬಂದಂತಹ ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕ ಅಶೋಕ್ ಹೆಗಡೆ ಬಂದಂತಹ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.












Leave a Reply