ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ ತೃತೀಯ ಶ್ರಾವಣ ಶನಿವಾರದ ಸಂಭ್ರಮ

ಆಗಸ್ಟ್ 29ರಂದು 3ನೇ ಶ್ರಾವಣ ಮಾಸದ ಶನಿವಾರದ ಅಂಗವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 25 ಸಾವಿರಕ್ಕೂ ಮಿಕ್ಕಿ ಜನರು ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು ಮಧ್ಯಾಹ್ನ ಸುಮಾರು ಆರು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬೋಜನ ಪ್ರಸಾದವನ್ನು ಸ್ವೀಕರಿಸಿದರುಬೆಳಿಗ್ಗೆ 10-30ರಿಂದ ಶ್ರೀಮತಿ. ಪ್ರಕೃತಿ ಉರಾಳ ಮತ್ತು ಬಳಗದವರಿಂದ ವೀಣಾವಾದನ, ಶ್ರೀಮತಿ ಮೀನಾ ಕಾರಂತ ಮತ್ತು ಬಳಗದವರಿಂದ ಭಕ್ತಿ ಸಂಗೀತ, ರಸರಂಗ ಮಹಿಳಾ ತಂಡದವರಿಂದ ಯಕ್ಷಗಾನ ತಾಳಮದ್ದಲೆ ಭಕ್ತ ಸುಧಾಮ ಕಾರ್ಯಕ್ರಮ ನಡೆಯಿತು 05-30ರಿಂದ ಸಮಾಜದಲ್ಲಿ ಸೇವೆ ಸಲ್ಲಿಸಿದ ಋತ್ವಿಜರನ್ನು ಸನ್ಮಾನಿಸಲಾಯಿತು.

ಪುರೋಹಿತರು ಮತ್ತು ಅಧ್ಯಾಪನ ಮಾಡುತ್ತಿರುವ ಮಣೂರು ವೇ. ಮೂ. ಚಂದ್ರಶೇಖರ ಅಡಿಗರು, ಶ್ರೀ ದೇವಳದ ಸರತಿ ಅರ್ಚಕರಾದ ಪಾರಂಪಳ್ಳಿ ವೇ. ಮೂ ಚಂದ್ರಶೇಖರ ಅಡಿಗರು, ಪುರೋಹಿತರಾದ ಕಟ್ಕೆರೆ ವೇ. ಮೂ ವಿಶ್ವನಾಥ ಐತಾಳರು, ಅರ್ಚಕರು ಮತ್ತು ಪುರೋಹಿತರಾದ ಹಂದಟ್ಟು ವೇ. ಮೂ. ಸೀತಾರಾಮ ಭಟ್ ಮತ್ತು ಶ್ರೀದೇವಳದ ಪವಿತ್ರಪಾಣಿ ಪಾರಂಪಳ್ಳಿ ಶ್ರೀ ಗಣೇಶ ಐತಾಳ ಇವರೆಲ್ಲರನ್ನು ದಂಪತಿ ಸಮೇತರಾಗಿ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯರು ಮತ್ತು ಸದಸ್ಯರಾದ ಶ್ರೀ ಕೆ.ತಾರಾನಾಥ ಹೊಳ್ಳರು, ಇವರನ್ನೆಲ್ಲ ಅಭಿನಂದಿಸಿ ಇವರೆಲ್ಲರ ಸೇವೆಯನ್ನು ಶ್ಲಾಘಿಸುತ್ತಾ ನಮ್ಮ ಕರೆಗೆ ಓಗೊಟ್ಟು ಆಗಮಿಸಿರುವ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಕೋಶಾಧಿಕಾರಿ ಶ್ರೀ ಲಕ್ಷ್ಮೀನಾರಾಯಣ ಹೊಳ್ಳರು ಸದಸ್ಯರಾದ ಶ್ರೀ ಜಿ. ಪ್ರಕಾಶ್ ಮಯ್ಯರು ಶ್ರೀ ಪ್ರಸನ್ನ ತುಂಗರು ಮತ್ತು ಪ್ರಭಾರ ವ್ಯವಸ್ಥಾಪಕರಾದ ಗಣೇಶ ಭಟ್ಟರು ಉಪಸ್ಥಿತರಿದ್ದರು. ಶ್ರೀಮತಿ ನಾಗರತ್ನ ಹೇರಳೆಯವರು ಕಾರ್ಯಕ್ರವನ್ನು ನಿರೂಪಿಸಿದರು. ನಂತರ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ (ರಿ) ಇವರಿಂದ. ಯಕ್ಷಗಾನ ದಮಯಂತಿ ಪುನಃ ಸ್ವಯವರ ಪ್ರಸಂಗವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Leave a Reply

Your email address will not be published. Required fields are marked *