ಕೋಟ: ಹಾಲು ಉತ್ಪಾದಕರ ಸಹಕಾರಿ ಸಂಘ ಕೋಡಿ ಕನ್ಯಾಣ ಇವರ ವಾರ್ಷಿಕ ಮಹಾಸಭೆಯು ಆ.24ರಂದು ಸಂಘದ ವಠಾರದಲ್ಲಿ ಜರಗಿತು. ಸಂಘದ ಅಧ್ಯಕ್ಷ ಕೆ ಪ್ರಭಾಕರ ಮೆಂಡನ್ ಅಧ್ಯಕ್ಷತೆ ವಹಿಸಿ ಸದಸ್ಯರಿಗೆ 25% ಡಿವಿಡೆಂಟ್ ಹಾಗೂ 65% ಬೋನಸ್ ಘೋಷಿಸಿದ ಅಧ್ಯಕ್ಷರು ಹಾಲಿನ ಪ್ರಮಾಣ ಹೆಚ್ಚಿಸಲು ಹೈನುಗಾರಿಕೆಗೆ ಪ್ರೋತ್ಸಾಹ ಹಾಗೂ ಪೂರಕವಾಗುವ ಎಲ್ಲಾ ಕಾರ್ಯಕ್ರಮ ಕೈಗೊಳ್ಳಲು ಸಂಘದ ಆಡಳಿತ ಮಂಡಳಿ ಸಿದ್ಧವಿದೆ ಎಂದರು. ಸಭೆಯಲ್ಲಿ ಸಂಘದ ಮಾಜಿ ನಿರ್ದೇಶಕ, ಹೈನುಗಾರರಾದ ಸಹಕಾರಿ ರತ್ನ ಕೊರಗ ಪೂಜಾರಿಯವರನ್ನು ಸಮ್ಮಾನಿಸಲಾಯಿತು.
ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ್ ಕುಂದರ್ ಅವರು ಒಕ್ಕೂಟದಿಂದ ಹೈನುಗಾರಿಕೆಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಉಮೇಶ್ ಐತಾಳ್ ವರದಿ ವಾಚಿಸಿದರು. ಸಂಘದ ನಿರ್ದೇಶಕರಾದ ವಿಶ್ವನಾಥ ಪೂಜಾರಿ ವಂದಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಮತಿ, ನಿರ್ದೇಶಕರಾದ ಸದಾಶಿವ ಐತಾಳ್, ಲಕ್ಷ್ಮೀ ಮರಕಾಲ್ತಿ, ರಘುರಾಮ ಮೆಂಡನ್, ಹರ್ಷ, ಕಾವೇರಿ, ಪಾರ್ವತಿ, ನೇತ್ರಾವತಿ, ವನಜಾ ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಹಕಾರಿ ಸಂಘ ಕೋಡಿಕನ್ಯಾಣ ಇವರ ವಾರ್ಷಿಕ ಮಹಾಸಭೆಯು ಆ.24ರಂದು ಸಂಘದ ವಠಾರದಲ್ಲಿ ಜರಗಿತು. ಸಂಘದ ಅಧ್ಯಕ್ಷ ಕೆ ಪ್ರಭಾಕರ ಮೆಂಡನ್, ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ್ ಕುಂದರ್, ಸಂಘದ ಕಾರ್ಯದರ್ಶಿ ಉಮೇಶ್ ಐತಾಳ್ ಇದ್ದರು.












Leave a Reply