ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೋಗವೀರ ಯುವ ಸಂಘಟನೆ ಕೋಟ ಘಟಕ: ಸಾಮೂಹಿಕ ಶನಿಶಾಂತಿ, ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

ಕೋಟ : ಮೋಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಕೋಟ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಶನಿಶಾಂತಿ, ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಆ. 30ರ ಭಾನುವಾರ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನಿಶ್ವರ ದೇವಸ್ಥಾನದದಲ್ಲಿ ಜರಗಿತು.

ಪದಪ್ರದಾನ ಕಾರ್ಯಕ್ರಮವನ್ನು ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಟ್ರಸ್ಟ್ ಪ್ರವರ್ತಕರಾದ ಆನಂದ ಸಿ. ಕುಂದರ್ ಉದ್ಘಾಟಿಸಿ ಶುಭಹಾರೈಸಿದರು. ನಾಡೋಜ ಡಾ.ಜಿ ಶಂಕರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಮೋಗವೀರ ಯುವ ಸಂಘ ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ಬಾರಿಕೆರೆ ವಹಿಸಿದ್ದರು.

ಈ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ಸತೀಶ್ ತಿಂಗಳಾಯ ಇವರಿಗೆ ಪ್ರಸ್ತುತ ಅಧ್ಯಕ್ಚ ರಂಜೀತ್ ಬಾರಿಕೆರೆ ಹಾಗೂ ಮಹಿಳಾ ಘಟಕದ ನಿಯೋಜಿತ ಅಧ್ಯಕ್ಷೆ ನಂದಿನಿ ಸುವರ್ಣ ಇವರಿಗೆ ಲಲಿತಾ ಭಾಸ್ಕರ್ ಅಧಿಕಾರ ಹಸ್ತಾಂತರಿಸಿದರು.ವಿಶೇಷ ಪುರಸ್ಕಾರದ ಭಾಗವಾಗಿ ಗುರಿಕಾರರಿಗೆ ಗೌರವಾಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸಂಮ್ಮಾನ ವೇದಿಕೆಯಲ್ಲಿದ್ದ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಕೊರವಾಡಿ , ಕರಡವಳಿ ಮೊಗವೀರ ಮಹಾಜನ ಸಂಘ ಉಚ್ಛಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಾರ್ಕೂರು ಮೋಗವೀರ ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್ , ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಘಟಕ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಪನಿರ್ದೇಶಕ ಜಗದೀಶ,ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ , ಮನಸ್ಮಿತಾ ಫೌಂಡೇಶನ್ ಪ್ರವರ್ತಕ ಡಾ| ಪ್ರಕಾಶ್ ತೋಳಾರ್, ಬೆಂಗಳೂರಿನ ಉದ್ಯಮಿ ಉಮೇಶ್‌ರಾಜ್ ಕೋಟ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಹಾಡಿಕೆರೆ ಶನೀಶ್ವರ ದೇಗುಲದ ಧರ್ಮದರ್ಶಿ ಭಾಸ್ಕರ ಸ್ವಾಮಿ,ಗುತ್ತಿಗೆದಾರ ಸುರೇಶ್ ಕಾಂಚನ್ ಬಾರಿಕೆರೆ, ನೋಟರಿ ವಕೀಲರಾದ ಕರುಣಾಕರ್ ನಾಯ್ಕ್, ಕೋಟ ಘಟಕದ ಸ್ಥಾಪಕಾಧ್ಯಕ್ಷ ಎಂ.ಎಸ್. ಸಂಜೀವ , ಮಾಜಿ ಅಧ್ಯಕ್ಷ ರಮೇಶ್ ಕುಂದರ್, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಭಾಸ್ಕರ್ , ನಿಕಟಪೂರ್ವ ಅಧ್ಯಕ್ಷೆ ಸುಮುತಿ ಭಾಸ್ಕರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪ್ರವೀಣ್ ಕುಂದರ್ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಶಾಂತ್ ಕೋಡಿ ಲೆಕ್ಕಪತ್ರ ವಾಚಿಸಿದರು.ಮಾಜಿ ಅಧ್ಯಕ್ಷ ಶಿವರಾಮ್ ಕೆ.ಎಂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಸುರೇಶ್ ಕೆ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಧನುಷ್ ಕಾಂಚನ್ ವಂದಿಸಿದರು.ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8.30 ರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಮೂಹಿಕ ಶನಿಶಾಂತಿ ಪೂಜಾ ಕಾರ್ಯಕ್ರಮಗಳು ಪೌರೋಹಿತ್ಯರ ಸಮ್ಮುಖದಲ್ಲಿ ಜರಗಿತು.

ಕೋಟತಟ್ಟು ಪಡುಕರೆಯ ಶ್ರೀ ಭಗವತ್ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಣೆ ಜರಗಿತು.ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಕೋಟ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಶನಿಶಾಂತಿ, ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೆರಿತು.

ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಟ್ರಸ್ಟ್ ಪ್ರವರ್ತಕರಾದ ಆನಂದ ಸಿ. ಕುಂದರ್ , ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಕೊರವಾಡಿ ,ಕರಡವಳಿ ಮೊಗವೀರ ಮಹಾಜನ ಸಂಘ ಉಚ್ಛಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಾರ್ಕೂರು ಮೋಗವೀರ ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್ , ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಘಟಕ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಇದ್ದರು.

Leave a Reply

Your email address will not be published. Required fields are marked *