ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಾನಸಿಕ ಆರೋಗ್ಯಕ್ಕೆ ಸಾಹಿತ್ಯ ಮತ್ತು ಸಂಗೀತವೇ ಔಷಧಿ – ಗಣಪತಿ ಹೆಗ್ಡೆ

ಭಾಷೆ ಸಂವಹನದ ಸಾಧನ. ಅಂತಹ ಭಾಷೆಯು ತನ್ನೊಳಗೆ ಸಾಹಿತ್ಯಾತ್ಮಕವಾದ ಮೌಲ್ಯವನ್ನು ಅಡಗಿಸಿಕೊಂಡಿರುತ್ತದೆ. ಸಾಹಿತ್ಯ ರಾಗ, ತಾಳದೊಂದಿಗೆ ಬೆರೆತಾಗ ಜನರ ಮನ ಮುಟ್ಟುತ್ತದೆ. ಉತ್ತಮ ಸಾಹಿತ್ಯ ಮತ್ತು ಸಂಗೀತಗಳಿoದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮಾನಸಿಕ ಆರೋಗ್ಯಕ್ಕೆ ಸಾಹಿತ್ಯ ಮತ್ತು ಸಂಗೀತ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಹಾಲಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕ ಮತ್ತು ಪ್ರವಚನಕಾರ ಗಣಪತಿ ಹೆಗ್ಡೆ ತಿಳಿಸಿದರು.

ಶಂಕರನಾರಾಯಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶ ಮತ್ತು ಕನ್ನಡ ಭಾರ್ಗವ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಮತ್ತು ಸಂಗೀತ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾನವನ ಭಾವನೆಗಳಿಗೆ ಅಗಾಧವಾದ ಶಕ್ತಿಯಿದೆ. ಭಾಷೆಯಲ್ಲಿ ಅದು ಸಂಗ್ರಹಗೊoಡು ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಕರ್ನಾಟಿಕ್, ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತಗಳ ಶೈಲಿ, ಸಾಹಿತ್ಯಕ್ಕೆ ಭಾವವನ್ನು ತುಂಬುತ್ತವೆ. ವಿದ್ಯಾರ್ಥಿಗಳು ತಮ್ಮ ಒತ್ತಡ ನಿವಾರಣೆಗೆ ಮೌಲ್ಯಯುತವಾದ ಸಂಗೀತವನ್ನು ಆಲಿಸಿದರೆ ಒಳ್ಳೆಯದೆಂದು ಸಂಗೀತದ ಮಹತ್ವವನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಇಂದಿನ ತಲೆಮಾರುಗಳಲ್ಲಿ ಸಂಗೀತ ಜ್ಞಾನದ ಕೊರತೆಯಿದ್ದು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಪಾಶ್ಚಾತ್ಯ ಸಂಗೀತದ ಮಾದರಿಗಳಿಗೆ ಮನಸೂರೆಗೊಳ್ಳುತ್ತಿದ್ದಾರೆ. ದೇಶೀಯವಾಗಿ ನಮ್ಮ ಭಾಷೆ, ಸಾಹಿತ್ಯ ಮತ್ತು ಸಂಗೀತ ಉತ್ಕೃಷ್ಟವಾದುದು. ಕನ್ನಡ ಭಾಷೆಯ ಹಳೆಯ ಸಿನಿಮಾ ಹಾಡುಗಳಲ್ಲಿನ ಮೌಲ್ಯಾತ್ಮಕ ಪ್ರಜ್ಞೆ ಸ್ಪೂರ್ತಿದಾಯಕವಾದುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಮತ್ತು ಕನ್ನಡ ಭಾರ್ಗವ ಸಂಘದ ಸಂಚಾಲಕ ಸಚಿನ್.ಎಸ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡದ ಸಹಾಯಕ ಪ್ರಾಧ್ಯಾಪಕ ಡಾ. ಗಂಗಾಧರ್ ಆರ್. ಎಚ್ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದಿವ್ಯ ಎಂ.ಎಸ್, ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶದ ಸಂಚಾಲಕಿ ಡಾ. ನಳಿನಾ ಆರ್.ಎನ್, ಕನ್ನಡ ಸಹಾಯಕ ಪ್ರಾಧ್ಯಾಪಕ ಮಹಾಲಿಂಗಪ್ಪ ಆರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *