ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಮಾರಿನಿರಂಜನಿ ಸಿ. ಅವರ ಭರತನಾಟ್ಯ ರಂಗಪ್ರವೇಶ

ಬೆಂಗಳೂರು; ನಗರದ ಪತ್ತಿ ಸಭಾಂಗಣದಲ್ಲಿ ಭಾನುವಾರ (ನವೆಂಬರ್ 22, 2026) ನೃತ್ಯಸಂಜೀವಿನಿ ಅಕಾಡೆಮಿಯ ವತಿಯಿಂದ ಉದಯೋನ್ಮುಖ ಪ್ರತಿಭೆ ಕುಮಾರಿ ನಿರಂಜನಿ ಸಿ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿತು.

ಸಾಂಪ್ರದಾಯಿಕ ‘ಪುಷ್ಪಾಂಜಲಿ’ಯೊಂದಿಗೆ ಪ್ರಾರಂಭವಾದ ನೃತ್ಯ ಪ್ರದರ್ಶನದಲ್ಲಿ ನಿರಂಜನಿ ಅವರು ಜತಿಸ್ವರ, ವರ್ಣ,ಕೃತಿ ಜಾವಳಿ ಮತ್ತು ಅಷ್ಟಪದಿಗಳನ್ನು ಅತ್ಯಂತ ಭಾವಪೂರ್ಣವಾಗಿ ಪ್ರಸ್ತುತಪಡಿಸಿ ಕಲಾರಸಿಕರ ಮನಸೂರೆಗೊಂಡರು. ಕಾರ್ಯಕ್ರಮವು ಲಯಬದ್ಧವಾದ ‘ತಿಲ್ಲಾನ’ದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಗಣ್ಯರಿಂದ ಪ್ರಶಂಸೆ: ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಕಲಾಶ್ರೀ ಡಾ. ತಿರುಮಲೆ ಶ್ರೀನಿವಾಸ್, ಖ್ಯಾತ ಕಥಕ್ ಕಲಾವಿದೆ ವಿದುಷಿ ಲಕ್ಷ್ಮಿ ಹಾಗೂ ಹಿರಿಯ ರಂಗ ನಿರ್ದೇಶಕ ಡಾ. ಬಿ. ವಿ. ರಾಜಾರಾಮ್ ಅವರು ಕಲಾವಿದೆಯ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನೃತ್ಯಪಟುವಿನ ಅಂಗಶುದ್ಧತೆ, ಕರಾರುವಾಕ್ಕಾದ ಲಯಬದ್ಧ ಹೆಜ್ಜೆಗಾರಿಕೆ ಮತ್ತು ನವರಸಗಳನ್ನು ಹೊರಹೊಮ್ಮಿಸಿದ ಅಭಿನಯ ಕೌಶಲ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಹಿಮ್ಮೇಳದ ಮೆರುಗು:ನೃತ್ಯಕ್ಕೆ ಪೂರಕವಾಗಿ ನಟುವಾಂಗದಲ್ಲಿ ಗುರು ವಿದುಷಿ ಫಣಿಮಾಲಾ ಅವರ ಸಮರ್ಥ ನಿರ್ದೇಶನವಿತ್ತು. ಹಿನ್ನೆಲೆ ಗಾಯನದಲ್ಲಿ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ, ಮೃದಂಗದಲ್ಲಿ ಜಿ. ಎಸ್. ನಾಗರಾಜ್, ವಯಲಿನ್ ವಾದನದಲ್ಲಿ ಬಿ. ಎಸ್. ಮಧುಸೂದನ್ ಮತ್ತು ಕೊಳಲು ವಾದನದಲ್ಲಿ ವಿದ್ವಾನ್ ತೇಜಸ್ವಿ ರಘುನಾಥ್ ಅವರ ಅಮೋಘ ಸಹಕಾರವು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕಲಾಭಿಮಾನಿಗಳು ಮತ್ತು ಗಣ್ಯರು ನವ ಪ್ರತಿಭೆ ನಿರಂಜನಿ ಸಿ. ಅವರ ಕಲಾಸೇವೆಗೆ ಹಾರೈಸಿದರು.

Leave a Reply

Your email address will not be published. Required fields are marked *