ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗೆಳೆಯರ ಬಳಗದಿಂದ ಗೋಶಾಲೆಗೆ ಎರಡು ಲೋಡು ಒಣಹುಲ್ಲು ಹಸ್ತಾಂತರ

ಕಾರ್ಕಡ: ಗೆಳೆಯರ ಬಳಗ (ರಿ.), ಕಾರ್ಕಡ ಸಾಲಿಗ್ರಾಮ ಇವರ ವತಿಯಿಂದ ಬಳಗದ ಸದಸ್ಯರು ಹಾಗೂ ಕಾರ್ಕಡ ಗ್ರಾಮಸ್ಥರಿಂದ ಸಂಗ್ರಹಿಸಲಾದ ಎರಡು ಲೋಡು ಒಣಹುಲ್ಲನ್ನು ದಿನಾಂಕ 22/11/2026ರಂದು ಆರೂರು ಬೆಳ್ಮಾರಿನಲ್ಲಿರುವ “ಪುಣ್ಯಕೋಟಿ ಗೋ ಸೇವಾ ಕೇಂದ್ರ”ಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗೋ ಪೂಜೆ ನೆರವೇರಿಸಿ, ಗೋವುಗಳಿಗೆ ಗೋಗ್ರಾಸ ಅರ್ಪಿಸಲಾಯಿತು. ಸಂಗ್ರಹಿಸಿದ ಒಣಹುಲ್ಲಿನಲ್ಲಿ ಸ್ವಲ್ಪ ಪ್ರಮಾಣವನ್ನು ಶ್ರೀ ಗುರುನರಸಿಂಹ ದೇವಸ್ಥಾನಕ್ಕೂ ನೀಡಲಾಯಿತು.ಈ ಕೊಡುಗೆಯನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಗೋಶಾಲೆಯ ನಿರ್ದೇಶಕ ಶ್ರೀ ಶ್ರೀನಿವಾಸ ಅವರು ಮಾತನಾಡಿ, “ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ ಅವರ ಸಮಾಜಸೇವೆ ಹಾಗೂ ಬಳಗದ ಸದಸ್ಯರಿಗೆ ಗೋವುಗಳ ಮೇಲಿರುವ ಪ್ರೀತಿ ಮತ್ತು ಭಕ್ತಿಗೆ ಈ ಸೇವೆಯೇ ಸಾಕ್ಷಿಯಾಗಿದೆ. ಗೋವುಗಳಿಗೆ ಹುಲ್ಲು ನೀಡುವ ಮೂಲಕ ಈ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಂಡ ಗೆಳೆಯರ ಬಳಗದ ಎಲ್ಲ ಸದಸ್ಯರಿಗೂ ಗೋಮಾತೆಯ ಅನುಗ್ರಹ ಸದಾ ಇರಲಿ” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಜೊತೆ ಕಾರ್ಯದರ್ಶಿ ಕೆ. ಜಗದೀಶ ಆಚಾರ್ಯ, ಕೆ. ಶ್ರೀಪತಿ ಆಚಾರ್ಯ, ಕೆ. ಶೇಖರ, ಕೆ. ಉದಯ ಐತಾಳ, ಕೆ. ರಾಘವೇಂದ್ರ ಸೇರಿದಂತೆ ಬಳಗದ ಇತರ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *