ಕೋಟ: ಅಮೃತೇಶ್ವರೀ ಮೇಳವೇ ಗಜಗಟ್ಟಿ ಮೇಳವಾಗಿ ಹೊರಹೊಮ್ಮಿದ್ದು ಇಲ್ಲಿ ಗೆಜ್ಜೆಕಟ್ಟಿದ ಕಲಾವಿದರು ಪ್ರಸಿದ್ಧಿ ಹೊಂದಿದ್ದಾರೆ ಎಂದು ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಹೇಳಿದರು.ಬುಧವಾರ ಕೋಟದ ಅಮೃತೇಶ್ವರೀ ದೇಗುಲದಲ್ಲಿ ಶ್ರೀ ಕ್ಷೇತ್ರ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸೇವೆಯಾಟದಲ್ಲಿ ಮುಖ್ಯ ಅಥಿತಿ ಯಾಗಿ ಮಾತನಾಡಿ ಚಿಟ್ಟಾಣಿ,ಕಾಳಿಂಗ ನಾವಡ ,ಉಪ್ಪೂರರಂತಹ ಮಹಾನ್ ಕಲಾವಿದರು ಅಮೃತೇಶ್ವರೀ ಮೇಳದ ಮೂಲಕ ಬಹುದೊಡ್ಡ ಕಲಾವಿದರಾಗಿ ಯಕ್ಷಗಾನ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ.
ಅದೇ ರೀತಿ ಶ್ರೀ ದೇಗುಲ ಕಾರಣಿಕ ಕ್ಷೇತ್ರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವುದು ಗಮನಾರ್ಹ ಎಂದರು.ಈ ಸಂದರ್ಭದಲ್ಲಿ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಬಳಾಲುಕೊಪ್ಪ ಸದಾನಂದ ಹೆಬ್ಬಾರ್ ಇವರಿಗೆ ಹಾಗೂ ಕೋಟ ದಿ.ವೈಕುಂಠ ಸ್ಮರಣಾರ್ಥ ಯಕ್ಷ ಕಿನ್ನರ ಪ್ರಶಸ್ತಿಯನ್ನು ಹಿರಿಯ ಕಲಾವಿದ ಬಾಬು ಕುಲಾಲ್ ಹಳ್ಳಾಡಿ ಇವರಿಗೆ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಭಾಗವತ ಹೇರಂಜಾಲು ಗೋಪಾಲ ಗಾಣಿಗರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ಗಿಳಿಯಾರು ವಹಿಸಿದ್ದರು.
ಕೋಟ ವೈಕುಂಠ ಯಕ್ಷಕಿನ್ನರ ಪ್ರಶಸ್ತಿಯನ್ನು ಕೋಟ ವೈಕುಂಠರ ಪುತ್ರ ಉದ್ಯಮಿ ಉಮೇಶ್ ರಾಜ್ ಬೆಂಗಳೂರು ಪ್ರದಾನಿಸಿದರು. ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ತಾರಾನಾಥ ಹೊಳ್ಳ ಪ್ರದಾನಿಸಿದರು. ಯಕ್ಷಗಾನ ಮೇಳದ ಪರಿಕರಕ್ಕೆ ಸಹಕಾರ ನೀಡಿದವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿ ಎಂ.ಶಿವ ಪೂಜಾರಿ,ಸುಧಾ ಎ ಪೂಜಾರಿ,ಜ್ಯೋತಿ ಕಾಂಚನ್,ಸುಬ್ರಾಯ ಜೋಗಿ ಉಪಸ್ಥಿತರಿದ್ದರು. ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು ಸ್ವಾಗತಿಸಿ ವಂದಿಸಿದರೆ, ಟ್ರಸ್ಟಿ ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಹ್ನ ದೇಗುಲದಲ್ಲಿ ಮೇಳದ ಗಣೇಶ ಮೂರ್ತಿಗೆ ಗಣಹೋಮ ಮತ್ತು ಗಣಪತಿಪೂಜೆ ನೆರವೆರಿಸಲಾಯಿತು.
ಕೋಟದ ಅಮೃತೇಶ್ವರೀ ದೇಗುಲದಲ್ಲಿ ಶ್ರೀ ಕ್ಷೇತ್ರ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸೇವೆಯಾಟದಲ್ಲಿ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಬಳಾಲುಕೊಪ್ಪ ಸದಾನಂದ ಹೆಬ್ಬಾರ್ ಇವರಿಗೆ ಹಾಗೂ ಕೋಟ ದಿ.ವೈಕುಂಠ ಸ್ಮರಣಾರ್ಥ ಯಕ್ಷ ಕಿನ್ನರ ಪ್ರಶಸ್ತಿಯನ್ನು ಹಿರಿಯ ಕಲಾವಿದ ಬಾಬು ಕುಲಾಲ್ ಹಳ್ಳಾಡಿ ಇವರಿಗೆ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಭಾಗವತ ಹೇರಂಜಾಲು ಗೋಪಾಲ ಗಾಣಿಗರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.












Leave a Reply