ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಎನ್.ಹೆಚ್ 169ಎ ಭೂಸ್ವಾಧೀನ ಪರಿಹಾರದ ಬಗ್ಗೆ ಕುಂದಾಪುರ ಎ.ಸಿ ಕಚೇರಿಯಲ್ಲಿ ಸಂಸದ ಕೋಟ ಸಭೆ

ರಾಷ್ಟ್ರೀಯ ಹೆದ್ದಾರಿ 169ಎ ನ, ಕರಾವಳಿ ಜಂಕ್ಷನ್ ಮತ್ತು ಮಲ್ಪೆ ರಸ್ತೆಗೆ ಸಂಬಂಧಿಸಿದಂತೆ ಭೂ ಪರಿಹಾರ, ಜಂಟಿ ಖಾತೆಗಳ ಸರ್ವೆ, ಮೂಲಿ ಹಕ್ಕಿನ ವಿವಾದಗಳನ್ನು ಪರಿಹರಿಸಿ, ಭೂಮಾಲೀಕರಿಗೆ ಹಣಪಾವತಿ ಮಾಡಲು ಕರಾವಳಿ-ಮಲ್ಪೆ ಸಂಪರ್ಕ ರಸ್ತೆಯ ನಿರ್ಮಾಣದ ಅಂತಿಮ ಹಂತದ ಸಭೆಯು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕುಂದಾಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯಿತು.

ಮಲ್ಪೆ, ಕೊಡವೂರು ಭಾಗದ 50 ಮಂದಿ ಭೂ ಮಾಲೀಕರು, ಮತ್ತು 25ಕ್ಕೂ ಹೆಚ್ಚು ಮಂದಿ ಜಂಟಿ ಖಾತೆದಾರರಿಗೆ ಹಾಗೂ ಮೂಲಿಹಕ್ಕು ಪರಿಹಾರದ ಬಗ್ಗೆ ಚರ್ಚಿಸಿ 15 ದಿನಗಳೊಳಗೆ ಪರಿಹಾರದ ಕಾರ್ಯ ನಡೆಯಬೇಕೆಂದು ನೂತನ ಎ.ಸಿ ಮಹೇಶರಿಗೆ ಸಂಸದರು ಸೂಚಿಸಿದರು. ಅಲ್ಲದೆ, ಕಾರ್ಕಳ ತಾಲೂಕಿನ ಮಾಳಾದ 4 ಮಂದಿ, ಮಿಯಾರಿನ 19 ಮಂದಿ, ಮುಡಾರು ಮತ್ತು ಸಾಣೂರಿನ 39 ಮಂದಿಗೆ ಪರಿಹಾರ ನೀಡಲು ಅಗತ್ಯ ಕ್ರಮವಹಿಸಲು ಮತ್ತು ಹಿರಿಯಡ್ಕ ಪೇಟೆಯ ಕಟ್ಟಡಗಳ ತೆರವುಗೊಳಿಸಲು ಇರುವ ಅಡೆತಡೆಗಳನ್ನು ಪರಿಹರಿಸಿ ಸಮರ್ಪಕಗೊಳಿಸಲು ಸಂಸದ ಕೋಟ ಸೂಚನೆ ನೀಡಿದರು.

ಸಭೆಯಲ್ಲಿ ಕುಂದಾಪುರದ ಎ.ಸಿ ಮಹೇಶ್, ಎನ್.ಎಚ್ 169ಎನ ಅಧಿಕಾರಿಗಳಾದ ಮಂಜುನಾಥಗೌಡ, ನವೀನ್ ಮತ್ತು ಮಾಜಿ ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಗಿರೀಶ್ ಅಂಚನ್, ಶಿವಪುರ ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *