ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ- ತುಳಸಿ ಪೂಜೆ ಮತ್ತು ಗೋ ಪೂಜೆ ನಮ್ಮ ಸಂಸ್ಕೃತಿಯ ಪ್ರತೀಕ-ಕೊರ್ಗಿಯ ಶ್ರೀ ವ್ಯಾಸಕೃಷ್ಣ ಉಪಾಧ್ಯಾಯ

ಕೋಟ: ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ–ತೆಕ್ಕಟ್ಟೆ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ತುಳಸಿ ಪೂಜೆ ಹಾಗೂ ಗೋ ಪೂಜೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ತುಳಸಿ ಪೂಜಾ ಮಹತ್ವದ ಬಗ್ಗೆ ಕೊರ್ಗಿಯ ವ್ಯಾಸಕೃಷ್ಣ ಉಪಾಧ್ಯಾಯ ಮಾಹಿತಿ ನೀಡಿ ತುಳಸಿಯನ್ನು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸಸ್ಯವಾಗಿ ಪೂಜಿಸುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದೇ ರೀತಿ ಗೋವನ್ನು ಮಾತೃಸ್ವರೂಪವಾಗಿ ಗೌರವಿಸುವುದು ನಮ್ಮ ಸನಾತನ ಸಂಸ್ಕೃತಿಯ ವಿಶಿಷ್ಟ ಪರಂಪರೆಯಾಗಿದೆ.

ಈ ಆಚರಣೆಗಳ ಮೂಲಕ ಮಕ್ಕಳಲ್ಲಿ ಪ್ರಕೃತಿ, ಗೋಸಂರಕ್ಷಣೆ ಹಾಗೂ ನಮ್ಮ ಸಂಸ್ಕೃತಿ–ಪರಂಪರೆಯ ಬಗ್ಗೆ ಗೌರವ ಮತ್ತು ಪ್ರೀತಿಯ ಮನೋಭಾವ ಪೂರಕ ಎಂದರು. ಇದೇ ವೇಳೆ ಕೊರ್ಗಿಯ ವ್ಯಾಸಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ತುಳಸಿ ಪೂಜೆ ಹಾಗೂ ಗೋ ಪೂಜೆ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ನೆರವೇರಿತು.

ಕಾರ್ಯಕ್ರಮದಲ್ಲಿ ಮಾತೃಭಾರತಿ ಅಧ್ಯಕ್ಷೆ ಶೃತಿ ಉಡುಪ, ಕಾರ್ಯದರ್ಶಿ ಸಿಂಧು ಐತಾಳ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಹರ್ಷ ಕೋಟೇಶ್ವರ ಉಪಸ್ಥಿತರಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮಾತೃಭಾರತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾ ಕಾರ್ಯದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ–ತೆಕ್ಕಟ್ಟೆ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ತುಳಸಿ ಪೂಜೆ ಹಾಗೂ ಗೋ ಪೂಜೆ ಕಾರ್ಯಕ್ರಮವು ಕೊರ್ಗಿಯ ವ್ಯಾಸಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಜರಗಿತು.

Leave a Reply

Your email address will not be published. Required fields are marked *