ಹೊಸೂರು: ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹರ್ಲಾಡಿಕೆರೆ ಹೊಸೂರಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.ದಿ. ದಿನಕರ ಶೆಟ್ಟಿ ನಿಡೂಟಿ ಹಿತೈಷಿ ಮತ್ತು ಅಭಿಮಾನಿ ಬಳಗ, ಸ್ಪೂರ್ತಿ ಯುವ ವೇದಿಕೆ ಹೊಸೂರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಜಡ್ಕಲ್ ಕಾನ್ಕಿ ಹಾಗೂ ಲಯನ್ಸ್ ಕ್ಲಬ್ ಹಂಗಳೂರು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ದಿನಾಂಕ 09-11-2026ರ ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ, ಹರ್ಲಾಡಿಕೆರೆ ಹೊಸೂರು ಇಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿಯ ಅಧ್ಯಕ್ಷರು ಹಾಗೂ ‘ರಕ್ತದ ಆಪತ್ಬಾಂಧವ’ ಎಂದೇ ಗುರುತಿಸಿಕೊಂಡಿರುವ ಶ್ರೀ ಸತೀಶ್ ಸಾಲ್ಯಾನ್ ಮಣಿಪಾಲ್, ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷರಾದ ಶ್ರೀ ಹಂಸರಾಜ್ ಶೆಟ್ಟಿ ಕುಂದಾಪುರ, ಭಾರತೀಯ ರೆಡ್ ಕ್ರಾಸ್ ಸೊಸೈಟಿ (ರಿ.) ಕುಂದಾಪುರದ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಪುರಾಣಿಕ್ ಹಾಗೂ ರಕ್ತದಾನಿ ಶ್ರೀ ವಿಜಯ್ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹರ್ಲಾಡಿಕೆರೆಯ ಅಧ್ಯಕ್ಷರಾದ ಶ್ರೀ ನಾಗರಾಜ್ ಶೆಟ್ಟಿ, ಶ್ರೀ ಭಾಸ್ಕರ್ ಶೆಟ್ಟಿ, ಶ್ರೀ ಜಯರಾಮ್ ಶೆಟ್ಟಿ, ಶ್ರೀ ನಾರಾಯಣ ಶೆಟ್ಟಿ, ಶ್ರೀಮತಿ ಶಾಲಿಕಾ ಶೆಟ್ಟಿ, ಶ್ರೀ ಸುಂದರ ಶೆಟ್ಟಿ, ಶ್ರೀ ಪ್ರವೀಣ್ ಶೆಟ್ಟಿ ಮೇಲ್ ಹೊಸೂರು, ಶ್ರೀ ಪ್ರಶಾಂತ್ ತಲ್ಲೂರು, ಶ್ರೀ ಸುಧಾಕರ್ ಶೆಟ್ಟಿ, ಶ್ರೀ ಶರತ್ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು .ರಕ್ತದಾನದ ಮಹತ್ವವನ್ನು ಸಾರುವ ಈ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡ ರಕ್ತದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು.















Leave a Reply