ಕೋಟ: ಇಲ್ಲಿನ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇದರ ಅಧ್ಯಕ್ಷರಾಗಿ ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ರಾಗಿ ಆನಂದ್ ಸಿ ಕುಂದರ್, ಕಾರ್ಯದರ್ಶಿಯಾಗಿ ಸುರೇಶ್, ಜೊತೆಕಾರ್ಯದರ್ಶಿ ರಾಘವೇಂದ್ರ ಕರ್ಕೇರ ಕೋಡಿ, ಕೋಶಾಧಿಕಾರಿಯಾಗಿ ಜಗನಾಥ ಬಂಗೇರ, ಜೊತೆ ಕೋಶಾಧಿಕಾರಿ ಪ್ರಶಾಂತ್ ಕೋಡಿ, ಉಪಾಧ್ಯಕ್ಷರಾಗಿ ಸಂಜೀವ ಎಂ ಎಸ್, ಸುರೇಶ್ ಕಾಂಚನ್ ಬಾರಿಕೆರೆ, ಗಿರಿಜಾ ಸುವರ್ಣ, ಕ್ರೀಡಾಕಾರ್ಯದರ್ಶಿಯಾಗಿ ರಂಜಿತ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೇವತಿರಾಜ್, ಗೌರವ ಸಲಹೆಗಾರರು, ಸೇರಿದಂತೆ ನಿರ್ದೇಶಕರುಗಳನ್ನು ಆಯ್ಕೆಗೊಳಿಸಲಾಗಿದೆ.
ನ.14 ಕ್ಕೆ ಪದಪ್ರದಾನ ಸಮಾರಂಭ ನವೆಂಬರ್ 14ರಂದು ಸಾಲಿಗ್ರಾಮ ಕರಾವಳಿ ಮೊಗವೀರ ಸಭಾಂಗಣದಲ್ಲಿ ಕರಾವಳಿಮೊಗವೀರ ಮಹಾಜನ ಸಂಘದ ಪದಪ್ರದಾನ ಸಮಾರಂಭ ಪೂರ್ವಾಹ್ನ 10.30ಕ್ಕೆ ನಡೆಯಲಿದ್ದು ನಾಡೋಜ ಡಾ.ಜಿ.ಶಂಕರ್, ಆನಂದ್ ಸಿ ಕುಂದರ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಗುರಿಕಾರರಿಗೆ ಗೌರವಧನ, ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ಕಾರ್ಯಕ್ರಮ ಜರಗಲಿದೆ.











Leave a Reply