ಕಿರಣ್ ಪೂಜಾರಿ ಸಾರಥ್ಯದಲ್ಲಿ…..

“ದೀಪದಿಂದ ದೀಪಾವಳಿ ಆಚರಿಸಿ, ಗಿಡ ನೆಟ್ಟು, ಪರಿಸರ ಉಳಿಸಿ” ಅಭಿಯಾನವಾಸವಿ ಅವೆನ್ಯೂ ರಸ್ತೆ ಯುವಕ ಸಂಘದಿಂದ 501 ಸಸಿಗಳ ವಿತರಣೆ

ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ದೀಪಾವಳಿ ಮಹತ್ವವ ಸಾರುವ ಉದ್ದೇಶದಿಂದ, ವಾಸವಿ ಅವೆನ್ಯೂ ರಸ್ತೆ ಯುವಕ ಸಂಘದಿಂದ ಬೆಂಗಳೂರಿನ ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿ ಸಾರ್ವಜನಿಕರಿಗೆ 501 ಸಸಿಗಳನ್ನು ವಿತರಿಸುವ ಮೂಲಕ ರಚನಾತ್ಮಕ ದೀಪಾವಳಿ ಆಚರಣೆಗೆ ಪ್ರೇರೇಪಣೆ ನೀಡಿದೆ. ಗುರುಪ್ರಸಾದ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು “ದೀಪ ಬೆಳಗಿಸಿ, ದೀಪದಿಂದ ದೀಪಾವಳಿ ಆಚರಿಸಿ, ಗಿಡ ನೆಟ್ಟು, ಪರಿಸರ ಉಳಿಸಿ” ಅಭಿಯಾನದ ಮೂಲಕ ಪರಿಸರ ಸಂದೇಶ ಸಾರಿದರು. ಹಬ್ಬದ ಸಂಭ್ರಮ, ಪರಿಸರದ ಜೊತೆಗೆ ಜ್ಞಾನದ ಜ್ಯೋತಿ ಹೊತ್ತಿಸುವ ಸಿಎ ಡಾ. ವಿಷ್ಣು ಭರತ್ ರಚಿಸಿರುವ ಎಜುಕೇಶನ್ ಇಸ್ ದಿ ಟೂಲ್ ಆಫ್ ಸೆಕ್ಸಸ್ ಪುಸ್ತಕವನ್ನೂ ಸಾರ್ವಜನಿಕರಿಗೆ ವಿತರಿಸಲಾಯಿತು. ಸಂಘದ ಪ್ರಮುಖರಾದ ನಾಗೇಶ್, ಶಂಕರ್, ದ್ವಾರಕನಾಥ್ ಹಾಗೂ ಮಾಜಿ ಅಧ್ಯಕ್ಷರಾದ ಮುರಳಿ ಕೃಷ್ಣ ಮತ್ತು ರಾಜಾ ಅಂಜನ್ ಮತ್ತಿತರರು ಸಸಿಗಳನ್ನು ವಿತರಿಸಿ ಸಾರ್ಥಕತೆ ಮೆರೆದರು, ಈ ಸಂಘ ವಿವಿಧ ಕ್ಷೇತ್ರಗಳ ಸುಮಾರು 40 ಮಂದಿ ಸಮರ್ಪಣಾ ಮನೋಭಾವದ ಉದ್ಯಮಿಗಳನ್ನು ಒಳಗೊಂಡಿದ್ದು, 11 ವರ್ಷಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಪ್ರೇರಣೆಯಾಗಿದ್ದಾರೆ.

Leave a Reply

Your email address will not be published. Required fields are marked *