ಕಿರಣ್ ಪೂಜಾರಿ ಸಾರಥ್ಯದಲ್ಲಿ…..

77 ನೇ ಬಾರಿ ರಕ್ತದಾನ ಮಾಡಿದ ಮಾಳ ಹರ್ಷೇಂದ್ರ ಜೈನರವರಿಗೆ ಸನ್ಮಾನ

ಬೆಂಗಳೂರು: ಸೀನಿಯರ್ ಚೆಂಬರ್ ಇಂಟರ್‌ನ್ಯಾಷನಲ್ ಸ್ನೇಹಜ್ಯೋತಿ ಬೆಂಗಳೂರು ಲೀಜನ್ ವತಿಯಿಂದ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ, ಅಕ್ಟೋಬರ್ 2, ರಂದು ಆಯೋಜಿಸಿದ್ದ ಆರೋಗ್ಯ ಸೇವಾ ಕಾರ್ಯಕ್ರಮವ ನಡೆಯಿತು.

ಈ ಸಂದರ್ಭದಲ್ಲಿ ಫೋರ್ಟಿಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಹಾಗೂ ವೈದ್ಯಕೀಯ ಸಮಾಲೋಚನೆ100 ಸದ್ಯಸರು/ ಸಾರ್ವಜನಿಕರು ಉಪಯೋಗ ಪಡೇದುಕೊಂಡರು ಮತ್ತು ಲಯನ್ಸ್ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ 77 ಬಾರಿ ರಕ್ತದಾನ ಮಾಡಿರುವ ನಮ್ಮ ಸ್ನೇಹಜ್ಯೋತಿ ಬೆಂಗಳೂರು ಲೀಜನ್‌ನ ಸೀನಿಯರ್ ಸದಸ್ಯರು, ಇಂಟರ್ನ್ಯಾಷನಲ್ ಯೂಥ್ ಐಕಾನ್ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಖ್ಯಾತ ಸಾಮಾಜಿಕ ಹೋರಾಟಗಾರರು ಸಮಾಜ ಸೇವಕರು, ಕೊರೋನ ವಾರಿಯರ್, ಕೆಂಪೇಗೌಡ, ಜಿನವಾಣಿ, ಬಕವಾನ್ ಮಹಾವೀರ ಸೇವಾ ಪ್ರಶಸ್ತಿ ಪುರಸ್ಕೃತರು, ಬಿಎಸ್ಎಂ ಜೈನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಗಳಾದ ಮಾಳ ಹರ್ಷೇಂದ್ರ ಜೈನ್ ಅವರು ಉಪಸ್ಥಿತರಿದ್ದು, ಅವರ ಅಮೂಲ್ಯ ಸೇವೆಯನ್ನು ಗುರುತಿಸಿ, ಲೀಜನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಲಯನ್ಸ್ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯಕೀಯ ತಂಡ, ರಕ್ತದಾನಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು “ಆರೋಗ್ಯವೇ ಭಾಗ್ಯ – ರಕ್ತದಾನವೇ ಮಹಾದಾನ – ಸೇವೆಯೇ ನಮ್ಮ ಧ್ಯೇಯ! ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಸೀನಿಯರ್ ಪಿಪಿಎಫ್ ಅಧ್ಯಕ್ಷರು ಎಂ ಪರಮಶಿವಯ್ಯ ಹಾಗೂ ಫೌಂಡರ್ ಪ್ರೆಸಿಡೆಂಟ್ ಮತ್ತು ಕೋ ಆರ್ಡಿನೇಟರ್ ಸೀನಿಯರ್ ಪಿಪಿಎಫ್ ಎಚ್ ಆರ್ ನಾಗೇಶ್ ಹಾಗೂ ಎಸ್ ಸಿ ಐ ಸ್ನೇಹ ಜ್ಯೋತಿ ಬೆಂಗಳೂರು ಲೀಜನ್ ಎಲ್ಲ ಗೌರವಾನ್ವಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *