ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೇವಾ ಸಂಗಮ ಶಿಶು ಮಂದಿರ, ಕೋಟದಲ್ಲಿ ‘ದಸರಾ ಶಿಬಿರ 2026 ಆಯೋಜನೆ

ಕೋಟ: ಸೇವೆ ಮತ್ತು ಸಂಸ್ಕೃತಿ ಅನಾವರಣಕ್ಕೆ ಸೇವಾ ಸಂಗಮ ಪೂರಕ ವಾತಾವರ ಕಲ್ಪಿಸಿದೆ ಎಂದು ಸಾಮಾಜಿಕ ಮುಖಂಡ ಚೇಂಪಿ ವೆಂಕಟೇಶ ಭಟ್ ಹೇಳಿದರು.ಶನಿವಾರ ಇಲ್ಲಿನ ಕೋಟದ ಸೇವಾ ಸಂಗಮ ಶಿಶು ಮಂದಿರದ ನೇತೃತ್ವದಲ್ಲಿ 4 ನೇ ತರಗತಿಯಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ದಸರಾ ಶಿಬಿರ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಶಿಬಿರಗಳು ಪರಿಣಾಮಕಾರಿ ಈ ನಿಟ್ಟಿನಲ್ಲಿ ಸೇವಾಸಂಗಮ ಅರ್ಥಪೂರ್ಣ ಶಿಬಿರಕ್ಕೆ ಮುನ್ನುಡಿ ಬರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಸೇವಾಸಂಗಮ ಶಿಶುಮಂದಿರದ ಮಾಜಿ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಶಿಶುಮಂದಿರದ ಮಾತಾಜಿ ಸಹನಾ ಆಚಾರ್ಯ, ದೀಪ ಮಾತಾಜಿ, ಸಹಾಯಕಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಶು ಮಂದಿರದ ಕಾರ್ಯದರ್ಶಿ ಕಲಾವತಿ ಅಶೋಕ್ ನಿರೂಪಿಸಿ ವಂದಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಚೇಂಪಿ ವೆಂಕಟೇಶ ಭಟ್ ಹಾಗೂ ಶಿಕ್ಷಕಿ ನಾಗರತ್ನ ಹೇರ್ಳೆ ಭಾಗವಹಿಸಿದರು.

ಕೋಟದ ಸೇವಾ ಸಂಗಮ ಶಿಶು ಮಂದಿರದ ನೇತೃತ್ವದಲ್ಲಿ 4 ನೇ ತರಗತಿಯಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ದಸರಾ ಶಿಬಿರ 2026 ಕಾರ್ಯಕ್ರಮವನ್ನು ಸಾಮಾಜಿಕ ಮುಖಂಡ ಚೇಂಪಿ ವೆಂಕಟೇಶ ಭಟ್ ಉದ್ಘಾಟಿಸಿದರು. ಸೇವಾಸಂಗಮ ಶಿಶುಮಂದಿರದ ಮಾಜಿ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಶಿಶುಮಂದಿರದ ಮಾತಾಜಿ ಸಹನಾ ಆಚಾರ್ಯ ಇದ್ದರು.

Leave a Reply

Your email address will not be published. Required fields are marked *