ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವೇದಮೂರ್ತಿ ಶ್ರೀ ರಘುರಾಮ ಸೋಮಯಾಜಿ ನಿಧನ

ಕೋಟ: ಕೋಟ ಹರತಟ್ಟು ನಿವಾಸಿ, ವೇದಮೂರ್ತಿ ಶ್ರೀ ರಘುರಾಮ ಸೋಮಯಾಜಿ ಕೋಟ (95) ಅವರು ರವಿವಾರ, ಅಕ್ಟೋಬರ್ 4, 2026ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.ಅವರು 1931ರ ಆಗಸ್ಟ್ 7ರಂದು ಜನಿಸಿದ್ದರು. ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಕೃಷಿಕರಾಗಿಯೂ ಹಾಗೂ ವೈದಿಕ ವೃತ್ತಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ನಿಯಮ-ನಿಷ್ಠೆ, ಸರಳತೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಅವರು, ಸಮಾಜದ ಹಿತವನ್ನು ಬಯಸುತ್ತಾ, ತಮ್ಮ ಹೆಸರಿಗೆ ಕಳಂಕ ಬಾರದಂತೆ ಸಾರ್ಥಕ ಜೀವನ ನಡೆಸಿದವರು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬಂಧು-ಬಳಗ, ಶಿಷ್ಯವರ್ಗ ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *