ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂಕದ ಜೊತೆ ಕೌಶಲ್ಯ ವೃದ್ಧಿಸಿಕೊಳ್ಳಿ- ಸಂಪತ್ ಕುಮಾರ್ ಶೆಟ್ಟಿಕೋಟ ಶಾಲೆಗೆ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಕಂಪ್ಯೂಟರ್ ಕೊಡುಗೆ ಹಸ್ತಾಂತರಿಸಿ ಹೇಳಿಕೆ

ಕೋಟ: ಅಂಕದ ಜೊತೆ ಕೌಶಲ್ಯ ವೃದ್ಧಿಸಿಕೊಂಡರೆ ವಿದ್ಯಾರ್ಥಿಗಳ ಬದುಕು ಹಸನಾಗುವುದರಲ್ಲಿ ಸಂಶಯವೇ ಇಲ ಎಂದು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಹೇಳಿದರು.

ಮಂಗಳವಾರ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ವತಿಯಿಂದ ಸೇವಾ ಸಂಕಲ್ಪ ಯೋಜನೆಯಡಿ ಮೂರು ಕಂಪ್ಯೂಟರ್‌ನ್ನು ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ಧಿ ನಮ್ಮ ಸಂಸ್ಥೆ ಕಟಿಬದ್ಧರಾಗಿದ್ದು ಮಕ್ಕಳನ್ನುದ್ದೇಶಿಸಿ ನಿಮ್ಮ ಜೀವನದಲ್ಲಿ ಕಲಾಂ, ವಿವೇಕಾನಂದರನ್ನು ಆದರ್ಶವಾಗಿರಿಸಿಕೊಳ್ಳಿ ದೇಶ ಮೆಚ್ಚುವ ಪ್ರಜೆಯಾಗಿ ಹೊರಹೊಮ್ಮಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಹಾಗೂ ಫೌಂಡೇಶನ್ ನಿರ್ವಾಹಕಿ ವಿನಯ ಇವರುಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಎಂ.ಪಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ಶಿಕ್ಷಣ ಇಲಾಖೆಯ ಸಂಯೋಜಕಿ ಅನ್ನಪೂರ್ಣೇಶ್ವರಿ, ಬಿಆರ್ ಪಿ ಸುರೇಶ್ ನಾಯಕ್, ಕ್ಷೇತ್ರ ಸಮನ್ವಯ ಅಧಿಕಾರಿ ಸುರೇಶ್ ಕುಂದರ್, ಶಾಲಾ ವಾಹನ ಸಮಿತಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೀಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕಿ ಪುಷ್ಭಾವತಿ ಹೊಳ್ಳ ಸ್ವಾಗತಿಸಿದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸನ್ನಿಧಿ ಹೊಳ್ಳ ನಿರೂಪಿಸಿ, ಶಿಕ್ಷಕಿ ವಿನಯ ವಂದಿಸಿದರು.

ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ವತಿಯಿಂದ ಸೇವಾ ಸಂಕಲ್ಪ ಯೋಜನೆಯಡಿ ಮೂರು ಕಂಪ್ಯೂಟರ್‌ನ್ನು ಹಸ್ತಾಂತರ ಸಮಾರಂಭದಲ್ಲಿಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಹಾಗೂ ಫೌಂಡೇಶನ್ ನಿರ್ವಾಹಕಿ ವಿನಯ ಇವರುಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಎಂ.ಪಿ, ಬ್ರಹ್ಮಾವರ ಶಿಕ್ಷಣ ಇಲಾಖೆಯ ಸಂಯೋಜಕಿ ಅನ್ನಪೂರ್ಣೇಶ್ವರಿ, ಬಿಆರ್ ಪಿ ಸುರೇಶ್ ನಾಯಕ್, ಕ್ಷೇತ್ರ ಸಮನ್ವಯ ಅಧಿಕಾರಿ ಸುರೇಶ್ ಕುಂದರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *