ಬ್ರಹ್ಮಾವರ, ಮೇ31: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಬೈಕಾಡಿ ಸಲ್ವಡೋರ್ ನೊರೊನ್ಹಾ ಸುಸಜ್ಜಿತ ಈಜುಕೊಳದಲ್ಲಿ ಏಪ್ರಿಲ್ 1ರಿಂದ ಮೇ 31ರವರೆಗೆ ನಡೆದ ಈಜು ತರಬೇತು ಶಿಬಿರದ ಸಮಾರೋಪ ಸಮಾರಂಭ ಶ್ರೀಯುತ ಬಿಜು ಜಿ ನಾಯರ್ ಅವರ ಅಧ್ಯಕ್ಷತೆಯಲ್ಲಿ ಕ್ಲಬ್ಬಿನ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಶ್ರೀಯುತ ಅಶೋಕ್ ಮಳಬಾಗಿ, ಸಬ್ ಇನ್ಸ್ಪೆಕ್ಟರ್ , ಅರಕ್ಷಕರ ಠಾಣೆ ಬ್ರಹ್ಮಾವರ ಮತ್ತು ಶ್ರೀ ಉಮೇಶ್ ಶೆಟ್ಟಿ, ಅಧ್ಯಕ್ಷರು, ವ್ಯವಸಾಯ ಸಹಕಾರಿ ಸೇವಾ ಸಂಘ, ಶಂಕರನಾರಾಯಣ ಇವರು ಆಗಮಿಸಿ ಮಕ್ಕಳಿಗೆ ಈಜಿನ ತರಬೇತಿಯ ಪ್ರಾಮುಖ್ಯತೆಯ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿದರು ಮತ್ತು ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪದಕವನ್ನು ನೀಡಿ ಗೌರವಿಸಿದರು.
ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಗೌರವಾಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಹೆಗ್ಡೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನ ಸ್ವಾಗತಿಸಿದರು. ಖಜಾಂಜಿಗಳಾದ ಶ್ರೀಯುತ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯದರ್ಶಿಗಳಾದ ಮೇಜರ್ ಜಿ .ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ವಂದಿಸಿದರು. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯರು ಮತ್ತು ಹೆತ್ತವರು ಉಪಸ್ಥಿತರಿದ್ದರು.















Leave a Reply