ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಕ್ವಾಡಿ ಹಳೆಯಮ್ಮದೇವಿ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾಗಿ

ಕುಂದಾಪುರ, ಮೇ 29, ಶುಕ್ರವಾರ: ಕುಂದಾಪುರ ವಿಧಾನಸಭಾ ಕ್ಷೇತ್ರದ ವಕ್ವಾಡಿ ಗ್ರಾಮದ ಹಳೆಯಮ್ಮ, ಚಿಕ್ಕಮ್ಮ ಮತ್ತು ಹೈಗುಳಿ ಪರಿವಾರ ಹಾಗೂ ನಾಗದೇವರ ದೇವಸ್ಥಾನದ ಪ್ರಥಮ ಪ್ರತಿಷ್ಠಾ ವರ್ಧಂತೋತ್ಸವದ ಅಂಗವಾಗಿ ನಿರ್ಮಿಸಲಾದ ನೂತನ ಹಳೆಯಮ್ಮ ದೇವಿ ಸಭಾಭವನವನ್ನು ಶುಕ್ರವಾರ ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಿದರು.

ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ದೇವಸ್ಥಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.

ಈ ನೂತನ ಸಭಾಭವನವು ಭಕ್ತಾದಿಗಳಿಗೆ ಹಾಗೂ ಸ್ಥಳೀಯರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು ಹಳೆಯಮ್ಮ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ಶೆಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಇದೇ ಸಂದರ್ಭದಲ್ಲಿ ಸಭಾಭವನದ ಮುಖ್ಯ ಧಾನಿಗಳು ಕಾರ್ಯಕ್ರಮದ ಮುಖ್ಯ ಅತಿಥಿಯಾದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಇವರನ್ನು ದೈವಸ್ಥಾನದ ಹಳೆಯಮ್ಮ ಟೆಂಪಲ್ ಟ್ರಸ್ಟ್ ಮತ್ತು ಗ್ರಾಮಸ್ಥರ ವತಿಯಿಂದ ಗೌರವಿಸಲಾಯಿತು.

ವೇದಿಕೆಯಲ್ಲಿ ಗೋಳಿಹಾಡಿ ನಂದಿಕೇಶ್ವರ ದೈವಸ್ಥಾನದ ಮೊಕ್ತೇಸರರು ಕರುಣಾಕರ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ಕುಂಭಾಶಿ ಶಾಖೆ ಮ್ಯಾನೇಜರ್ ಕರುಣಾಕರ ಶೆಟ್ಟಿ, ಮಾಲಾಡಿ ಹೆಗ್ಗಾರ್ ಬೈಲ್ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಲಾಡಿ ರಾಜೀವ ಶೆಟ್ಟಿ, ಹಳೆಯಮ್ಮ ದೇವಿ ಟೆಂಪಲ್ ಟ್ರಸ್ಟ್ ವಕ್ವಾಡಿ ಅಧ್ಯಕ್ಷರಾದ ಶಾಂತರಾಮ್ ಶೆಟ್ಟಿ, ಉಪಸ್ಥಿತರಿದ್ದು ಕಾರ್ಯಕ್ರಮವನ್ನ ಶ್ರೀಮತಿ ಅಕ್ಷತಾ ಗಿರೀಶ್ ಐತಾಳ ನಿರೂಪಿಸಿದರು.

ಗಿರೀಶ್ ಐತಾಳ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ, ರಾಜಕೀಯ ಕ್ಷೇತ್ರದ ಪ್ರಮುಖರು, ಊರಿನ ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *